ADVERTISEMENT

ಚುನಾವಣಾ ವೆಚ್ಚ: ದಾಖಲಾತಿ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST

ರಾಮನಗರ: ವಿಧಾನಸಭಾ ಚುನಾವಣೆ–2018ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರ ನೀಡುವಂತೆ ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.

ಅಭ್ಯರ್ಥಿಗಳು ಖರ್ಚಿನ ಲೆಕ್ಕ ಪತ್ರಗಳನ್ನು ಅಫಿಡೆವಿಟ್ ಸಹಿತ ಅನುಬಂಧ 1 ರಿಂದ 9ರ ವರೆಗಿನ ಸಂಕ್ಷಿಪ್ತ ವಿವರವನ್ನು ತುಂಬಿ ಪೂರಕ ದಾಖಲೆಗಳೊಂದಿಗೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಚುನಾವಣಾ ಲೆಕ್ಕ ವೀಕ್ಷಕ, ಲೆಕ್ಕಸಿಬ್ಬಂದಿ ವಿಭಾಗಕ್ಕೆಇದೇ 30ರ ಒಳಗೆ ಹಾಜರು ಪಡಿಸಬೇಕು.

ನಿಗದಿತ ಅವಧಿಯೊಳಗೆ ದಾಖಲೆ ಸಲ್ಲಿಸದಿದ್ದಲ್ಲಿ ಮತ್ತು ತಪ್ಪು ಮಾಹಿತಿ ನೀಡಿದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ 1951ರಡಿ ಕ್ರಮ ವಹಿಸಲು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.