ADVERTISEMENT

ಜನಪದ ಗಾಯಕ ತುಮನೆಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST
ಜನಪದ ಗಾಯಕ ತುಮನೆಪ್ಪ ನಿಧನ
ಜನಪದ ಗಾಯಕ ತುಮನೆಪ್ಪ ನಿಧನ   

ಕೊಟ್ಟೂರು (ಬಳ್ಳಾರಿ ಜಿಲ್ಲೆ): ಬಾಲಬಸವ ಪರಂಪರೆಯ ಹಿರಿಯ ಗಾಯಕ, ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಬಾಲಬಸವರ ತುಮನೆಪ್ಪ (80) ಭಾನುವಾರ ನಿಧನರಾದರು.

ಅವರಿಗೆ ಐವರು ಪುತ್ರಿಯರು ಹಾಗೂ ನಾಲ್ವರು ಪುತ್ರರಿದ್ದಾರೆ.

ಉಜ್ಜಯಿನಿ ಗ್ರಾಮದವರಾದ ಅವರು ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿ ವಾಸವಾಗಿದ್ದರು. ಕೆಲ ದಿಗಳಿಂದ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಪಂಚಗಣಾಧೀಶ್ವರ ಕಾವ್ಯ, ಗೋಣಿಬಸವೇಶ್ವರ ಕಾವ್ಯ, ಮರುಳಸಿದ್ದಪ್ಪ ಕಾವ್ಯ ಸೇರಿ ಹಲವಾರು ಚಾರಿತ್ರಿಕ ಹಾಗೂ ಪೌರಾಣಿಕ ಕಾವ್ಯಗಳನ್ನು ಹಾಡುತ್ತಿದ್ದರು.

ADVERTISEMENT

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು, ಅವರು ಹಾಡಿದ ಗೋಣಿ ಬಸವೇಶ್ವರರ 8 ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದೆ.

ಅಂತ್ಯಕ್ರಿಯೆ ಸೋಮವಾರ ಗೊಲ್ಲರಹಳ್ಳಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.