ADVERTISEMENT

ಜಾನುವಾರು ಮಾರಾಟ ನಿರ್ಬಂಧ: ಪ್ರಧಾನಿಗೆ ಮುಖ್ಯಮಂತ್ರಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:01 IST
Last Updated 9 ಜೂನ್ 2017, 19:01 IST
ಜಾನುವಾರು ಮಾರಾಟ ನಿರ್ಬಂಧ: ಪ್ರಧಾನಿಗೆ ಮುಖ್ಯಮಂತ್ರಿ  ಪತ್ರ
ಜಾನುವಾರು ಮಾರಾಟ ನಿರ್ಬಂಧ: ಪ್ರಧಾನಿಗೆ ಮುಖ್ಯಮಂತ್ರಿ ಪತ್ರ   

ಬೆಂಗಳೂರು: ಜಾನುವಾರು ಮಾರಾಟ ನಿರ್ಬಂಧ ನಿಯಮವೇ ಅಸಾಂವಿಧಾನಿಕವಾಗಿದ್ದು, ಅದನ್ನು ವಾಪಸ್‌ ಪಡೆಯುವ ಬಗ್ಗೆ ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಜಾರಿಗೆ ತಂದಿರುವ ನಿಯಮವು ಭಾರತೀಯ ಸಮಾಜ ಹಾಗೂ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದೂ ಅವರು ವಿವರಿಸಿದ್ದಾರೆ.

ಶ್ರೀಸಾಮಾನ್ಯರು, ಬಡವರಿಗೆ ಮಾಂಸವು ಪ್ರೊಟೀನ್‌ನ ಮೂಲ ವಾಗಿದೆ. ದಲಿತರು ಮತ್ತು ಅಲ್ಪಸಂಖ್ಯಾತರಲ್ಲದೇ ಎಲ್ಲಾ ನಂಬಿಕೆಯ ಜನರೂ ಇದನ್ನು ಬಳಸುತ್ತಾರೆ. ಹೀಗಾಗಿ ನ್ಯಾಯ ಸಮ್ಮತವಲ್ಲದ ಹಾಗೂ ಅನವಶ್ಯಕ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.