ADVERTISEMENT

ಜಿಸ್ಯಾಟ್–6ಎ ಸಂಪರ್ಕ ಕಡಿತ

ಪಿಟಿಐ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಬೆಂಗಳೂರು: ಕಳೆದ ಗುರುವಾರವಷ್ಟೇ ಕಕ್ಷೆ ಸೇರಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಜಿಸ್ಯಾಟ್–6ಎ ಉಪಗ್ರಹವು ಭಾನುವಾರ ಬೆಳಿಗ್ಗೆ ಸಂಪರ್ಕ ಕಳೆದುಕೊಂಡಿದೆ.

ಉಪಗ್ರಹದ ಕೋನವನ್ನು ಬದಲಿಸುವ ಮತ್ತು ಕಕ್ಷೆಯಲ್ಲಿ ಇನ್ನೂ ಎತ್ತರಕ್ಕೆ ಏರಿಸುವ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಜಿಸ್ಯಾಟ್–6ಎ ಸಂಪರ್ಕ ಕಳೆದುಕೊಂಡಿತು. ಉಪಗ್ರಹದ ಕಕ್ಷೆಯನ್ನು ಮೂರು ಹಂತದಲ್ಲಿ ಏರಿಸಬೇಕಿತ್ತು. ಎರಡು ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು. ಆದರೆ ಮೂರನೇ ಹಂತದ ಕಾರ್ಯಾಚರಣೆ ಆರಂಭಿಸುವ ಮೊದಲೇ ಸಂಪರ್ಕ ಕಡಿತವಾಯಿತು ಎಂದು ಇಸ್ರೊ ಹೇಳಿದೆ.

ಮತ್ತೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ. ಸಂಪರ್ಕ ಪಡೆಯುವ ಸಾಧ್ಯತೆ ಇದೆ ಎಂದು ಇಸ್ರೊ ವಿಶ್ವಾಸ ವ್ಯಕ್ತಪಡಿಸಿದೆ.

ADVERTISEMENT

ಉಪಗ್ರಹ ಆಧರಿತ ಮೊಬೈಲ್‌ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಸೇನಾ ಬಳಕೆಗೆಂದೇ ಜಿಸ್ಯಾಟ್‌–6ಎಯಲ್ಲಿ ಭಾರಿ ದೊಡ್ಡ ಆ್ಯಂಟೆನಾ ಅಳವಡಿಸಲಾಗಿತ್ತು.

ಇದು ಕೆಲಸ ಆರಂಭಿಸಿದ್ದಿದ್ದರೆ ದೇಶದ ಯಾವುದೇ ಸ್ಥಳದಿಂದ ಉಪಗ್ರಹ ಆಧರಿತ ಸಂಪರ್ಕದಿಂದ ಕರೆ ಮಾಡಲು, ಸಂದೇಶ, ಚಿತ್ರ ಮತ್ತು ವಿಡಿಯೊಗಳ ರವಾನೆ ಸಾಧ್ಯವಾಗುತ್ತಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.