ADVERTISEMENT

ಟಂಟಂ ಪಲ್ಟಿ: ಒಬ್ಬ ಸಾವು, ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 15:46 IST
Last Updated 27 ಮಾರ್ಚ್ 2018, 15:46 IST
ಟಂಟಂ ಪಲ್ಟಿ: ಒಬ್ಬ ಸಾವು, ಐವರಿಗೆ ಗಾಯ
ಟಂಟಂ ಪಲ್ಟಿ: ಒಬ್ಬ ಸಾವು, ಐವರಿಗೆ ಗಾಯ   

ಯಾದಗಿರಿ: ಜಿನಕೇರಿಯಿಂದ ಹೊರಟು ಯಾದಗಿರಿಯತ್ತ ಬರುತ್ತಿದ್ದ ಟಂಟಂ ಚಾಲಕನ ನಿಯಂತ್ರಣ ತಪ್ಪಿ ನಗರದ ಹೊಸಳ್ಳಿ ಕ್ರಾಸ್ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಜಿನಕೇರಿಯ ನಿಂಗಪ್ಪ (43) ಎಂದು ಗುರುತಿಸಲಾಗಿದೆ. ಗಾಯಗೊಂಡ ಐವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಟಂಟಂ ಚಾಲಕ ಪರಾರಿಯಾಗಿದ್ದಾನೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.