ADVERTISEMENT

ಡಜನ್‌ಗಟ್ಟಲೆ ಲಿಂಬೆಹಣ್ಣು ತಿನ್ನುವ ಪುಟ್ಟಪ್ಪ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 20:31 IST
Last Updated 5 ಜನವರಿ 2014, 20:31 IST

ಶಿಗ್ಗಾವಿ: ಸಾಧನೆಗೆ ಕಾಲ ಮಿತಿಗಳಿಲ್ಲ, ಸಾಧಿಸಬೇಕೆಂಬ ಛಲ ಇದ್ದರೆ ಸಾಕು. ಇದಕ್ಕೆ ಅನ್ವರ್ಥ ಎಂಬಂತೆ ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ರೈತಪುಟ್ಟಪ್ಪ ಸವಣೂರ ಎಂಬುವರು ಮೂರು ಡಜನ್ ಲಿಂಬಿಹಣ್ಣು,
ಒಂದು ಕೆಜಿ ಖಾರದಪುಡಿ ತಿನ್ನುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

40 ವರ್ಷದ ರೈತ ಪುಟ್ಟಪ್ಪ, ಬಾಣಸಿಗನೂ ಹೌದು. ಹೊಲಕ್ಕೆ ಕಾಲಿಟ್ಟರೆ ಸಾಕು, ನೆಲ್ಲಿಕಾಯಿ, ಹುಣಿಸೆ, ಪರಂಗಿ, ಲಿಂಬೆಹಣ್ಣು, ಬೇವಿನಸೊಪ್ಪು ಹುಡುಕಿ ತಿನ್ನುತ್ತಾರೆ.

ಬೇಕೆನಿಸಿದಾಗ ಮೂರು ಡಜನ್ ಲಿಂಬೆ ಹಣ್ಣು ತಿಂದು, ಎಲೆ- ಅಡಿಕೆ ಜಗಿಯತ್ತಾರೆ. ಕೆಜಿಗಟ್ಟಲೆ ಖಾರಪುಡಿ ತಿಂದು ನೀರು ಕುಡಿದು ಮಾಮೂಲಿಯಂತೆ ಓಡಾಡುವರು. ಕರಿದ ಪದಾರ್ಥ ಮುಟ್ಟಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.