ADVERTISEMENT

ಡಿ.5-16ರವರೆಗೆ ವಿಧಾನಮಂಡಲ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಬೆಂಗಳೂರು: ಡಿಸೆಂಬರ್ 5ರಿಂದ 16ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧರಿಸಿದ್ದು, ವರ್ಷಕ್ಕೆ ಕನಿಷ್ಠ 100 ದಿನ ಅಧಿವೇಶನ ನಡೆಸಬೇಕೆನ್ನುವ ಪ್ರಸ್ತಾವವನ್ನು ತಿರಸ್ಕರಿಸಿದೆ.
 
ನೂರು ದಿನಕ್ಕೆ ಬದಲಾಗಿ, ಈಗಿರುವಂತೆ 60 ದಿನ ಅಧಿವೇಶನ ನಡೆಸಲು ಸಮ್ಮತಿ ಸೂಚಿಸಿತು ಎಂದು ಸಚಿವ ಎಸ್.ಸುರೇಶ್‌ಕುಮಾರ್ ಶುಕ್ರವಾರ ವಿವರಿಸಿದರು. ವಿಧಾನ ಪರಿಷತ್ತಿನಲ್ಲಿ ವಿಷಯ ಸಮಿತಿಗಳನ್ನು ರಚಿಸಬೇಕೆನ್ನುವ ಶಾಸಕ ಕೆ.ಸಿ.ಕೊಂಡಯ್ಯ ಅವರ ಕೋರಿಕೆಯನ್ನೂ ಸಭೆ ತಿರಸ್ಕರಿಸಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.