ADVERTISEMENT

ಡೋಂಗಿ ಹಿಂದುತ್ವವಾದ ಬಯಲಿಗೆಳೆಯುತ್ತೇನೆ

ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಡೋಂಗಿ ಹಿಂದುತ್ವವಾದ ಬಯಲಿಗೆಳೆಯುತ್ತೇನೆ
ಡೋಂಗಿ ಹಿಂದುತ್ವವಾದ ಬಯಲಿಗೆಳೆಯುತ್ತೇನೆ   

ಬಾಳೆಹೊನ್ನೂರು: 'ರಾಜ್ಯದಲ್ಲಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ಡೋಂಗಿ ಹಿಂದುತ್ವ ವಾದವನ್ನು ಬಯಲು ಮಾಡುವುದೇ ಶ್ರೀರಾಮಸೇನೆಯ ಪ್ರಮುಖ ಗುರಿಯಾಗಿದೆ’ ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಶನಿವಾರ ಇಲ್ಲಿ ಮಾತನಾಡಿದ ಅವರು, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆ ಮತ್ತು ಶಿವಸೇನೆ ಮೈತ್ರಿಯಾಗಿ ಬಲವಾದ ಸಂಘಟನೆ ಹೊಂದಿರುವ ರಾಜ್ಯದ 52 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ’ ಎಂದರು.

‘ನಿಜವಾದ ಹಿಂದುತ್ವ ರಾಜಕೀಯದಲ್ಲಿ ಹೇಗೆ ಏನು ಎಂಬುದನ್ನು ತೋರಿಸಿಕೊಡಬೇಕಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹಿಂದುತ್ವಕ್ಕೆ ಬಲ ತುಂಬುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ. ಬಿಜೆಪಿಯಲ್ಲಿ ಶೇ 50ರಷ್ಟು ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರೇ  ತುಂಬಿದ್ದು, ಇಡೀ ಜೀವಮಾನ ಕಾಂಗ್ರೆಸ್‌ನಲ್ಲಿದ್ದ ಎಸ್.ಎಂ.ಕೃಷ್ಣ ಅವರನ್ನೇ ಬಿಜೆಪಿಗೆ ಸೆಳೆದುಕೊಂಡ ಉದ್ದೇಶವೇನು’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.