ADVERTISEMENT

ತೆನೆ ಕಳಚಿಕೊಂಡ ಪೂಜಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಬೆಂಗಳೂರು: ಕೆಲವು ತಿಂಗಳ ಹಿಂದೆಯಷ್ಟೇ ರಾಜಕೀಯ `ರಂಗ' ಪ್ರವೇಶಿಸಿದ್ದ ಚಲನಚಿತ್ರನಟಿ ಪೂಜಾ ಗಾಂಧಿ ಅವರು ಶುಕ್ರವಾರ ಜೆಡಿಎಸ್ ತೊರೆದು ಕೆಜೆಪಿ ಸೇರಿದರು.ಮಲ್ಲೇಶ್ವರದಲ್ಲಿರುವ ಕೆಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆಜೆಪಿ ಕಾರ್ಯಕಾರಿ ಸಮಿತಿ ಸದಸ್ಯೆ ಐಶ್ವರ್ಯಾ ಅವರು ಪೂಜಾ ಗಾಂಧಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಕಳೆದ ಜನವರಿಯಲ್ಲಿ ಜೆಡಿಎಸ್ ಸೇರಿದ್ದ ಪೂಜಾ, ರಾಜ್ಯ ಜೆಡಿಎಸ್ ಯುವ ಮಹಿಳಾ ಘಟಕದ ಕಾರ್ಯಾಧ್ಯಕ್ಷರಾಗಿದ್ದರು.

ಕೆಜೆಪಿಗೆ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯಸಭಾ ಸದಸ್ಯ, ಬಿಜೆಪಿಯ ಆಯನೂರು ಮಂಜುನಾಥ್ ಅವರು ನನ್ನನ್ನು `ದಂಡುಪಾಳ್ಯದ ರಾಣಿ' ಎಂದು ಟೀಕಿಸಿದಾಗ ಪಕ್ಷದ ಯಾವ ಮುಖಂಡರೂ ನನ್ನ ಬೆಂಬಲಕ್ಕೆ ಬರಲಿಲ್ಲ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ನನಗೆ ಪಕ್ಷದಿಂದ ದೂರವಿರುವಂತೆ ಸೂಚಿಸಿದ್ದರು' ಎಂದು ದೂರಿದರು.

`ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನಲ್ಲಿ ಇರುವ ನಾಯಕತ್ವದ ಗುಣಗಳನ್ನು ಗೌರವಿಸಿರುವುದು ಸಂತೋಷ ತಂದಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.