ADVERTISEMENT

‘ದಲಿತ ಯುವಕರು ಆರ್‌ಎಸ್‌ಎಸ್‌ ಬಿಡಿ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:37 IST
Last Updated 5 ಅಕ್ಟೋಬರ್ 2017, 19:37 IST

ಹುಬ್ಬಳ್ಳಿ: ‘ದಲಿತ ಯುವಕರು ಆರ್ಎಸ್ಎಸ್‌ ನಿಂದ ಹೊರಬರಬೇಕು. ಶೀಟಿ ಅವರ ಕೈಯಲ್ಲಿ, ಲಾಠಿ ದಲಿತರ ಕೈಯಲ್ಲಿವೆ. ಅವರ ತಂತ್ರಗಳಿಗೆ ಒಳಗಾಗದೆ, ದಲಿತರು ವೈದಿಕ ಆಚಾರಗಳ ಅನುಕರಣೆ ಬಿಟ್ಟು ಹೊರಬನ್ನಿ’ ಎಂದು ಬೈಲೂರ ನಿಷ್ಕಲ ಮಂಟಪ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಗುರುವಾರ ಇಲ್ಲಿ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಬರಹಗಾರರ ಹಾಗೂ ಪತ್ರಕರ್ತರ ಎರಡನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ದಲಿತರು ವೈದಿಕ ಆಚರಣೆಗಳಿಂದ ಹೊರಬರದಿದ್ದಲ್ಲಿ, ದಲಿತರೊಳಗೆ ಮತೀಯವಾದಿಗಳ ವಿಚಾರಗಳನ್ನು ಬಲವಂತವಾಗಿ ನುಸುಳಿಸುತ್ತಾರೆ. ಗಣೇಶನ ದೇವಸ್ಥಾನದ ಪ್ರವೇಶಕ್ಕೆ ಬಿಡದ ವಿಪ್ರರು, ದಲಿತರ ಕೇರಿಗಳಲ್ಲಿ ಗಣಪತಿ ಕೂರಿಸುವುದನ್ನು ಕಲಿಸಿದರು. ವಿಪ್ರರು ನುಡಿದಂತೆ ನಡೆಯರು, ಅವರದು ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ ಎಂಬುದು ನೆನಪಿರಲಿ’ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.