ನಾಗರಹೊಳೆ: ಆನೆಗಳ ಹಾವಳಿ ತಡೆಯುವ ಸಲುವಾಗಿ ಅಳವಡಿಸಿದ್ದ ರೈಲ್ವೆ ಕಂಬಿ ಬೇಲಿಯನ್ನು ಆನೆಯೊಂದು ದಾಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆನೆ ರೈಲ್ವೆಕಂಬಿ ಬೇಲಿ ದಾಟುತ್ತಿರುವ ಚಿತ್ರಗಳನ್ನು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಸೆರೆಹಿಡಿದಿದ್ದಾರೆ.
ನಾಗರಹೊಳೆ ಹಾಗೂ ವಿರಾಜಪೇಟೆ ನಡುವೆ ಅಲ್ಲಲ್ಲಿ 6 ಕಿಲೋ ಮೀಟರ್ ಉದ್ದದ ರೈಲ್ವೆಕಂಬಿ ಬೇಲಿಯನ್ನು ನಿರ್ಮಾಣ ಮಾಡಲಾಗಿದೆ.
ಈ ವಲಯದ ಒಂದು ಕಡೆ ಆನೆ ಬೇಲಿಯನ್ನು ದಾಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.