ಬೆಂಗಳೂರು: ರಾಜ್ಯದ ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಿಗೂ ನೈರುತ್ಯ ಮುಂಗಾರು ಪ್ರವೇಶಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮುಂಚಿತವಾಗಿ ನೈರುತ್ಯ ಮುಂಗಾರು ಮಾರುತಗಳ ಪ್ರವೇಶವಾಗಿದೆ. ಕಳೆದ ವರ್ಷ ಜೂನ್ 16ರಂದು ರಾಜ್ಯಕ್ಕೆ ನೈರುತ್ಯ ಮುಂಗಾರು ಮಾರುತಗಳ ಪ್ರವೇಶವಾಗಿತ್ತು.
ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕರಾವಳಿಯ ಹಲವು ಭಾಗಗಳು ಮತ್ತು ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ನೈರುತ್ಯ ಮುಂಗಾರು ಮಾರುತಗಳು ಕ್ಷೀಣಿಸಿವೆ.
ದೊಡ್ಡಬಳ್ಳಾಪುರದಲ್ಲಿ 8 ಸೆಂ.ಮೀ. ಮಳೆಯಾಗಿದೆ. ನಿಪ್ಪಾಣಿ 6, ಚಿಂಚೋಳಿ, ಜೇವರ್ಗಿ, ತೊಂಡೇಬಾವಿ 5, ಆಳಂದ 4, ಆಗುಂಬೆ 3, ಬೆಳ್ತಂಗಡಿ, ಧರ್ಮಸ್ಥಳ, ಕೋಟ, ಸಿದ್ದಾಪುರ, ಭಟ್ಕಳ, ಕುಮಟಾ, ಔರಾದ್, ಚಿಟಗುಪ್ಪ, ಹುಮನಾಬಾದ್, ಶೃಂಗೇರಿ, ಎನ್.ಆರ್.ಪುರ, ಜಯಪುರ 2, ಪುತ್ತೂರು, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾರ್ಕಳ, ಕುಂದಾಪುರ, ಶಿರಾಲಿ, ಗುಲ್ಬರ್ಗ, ಭಾಗಮಂಡಲ, ಹೊಸನಗರ, ಹುಲಿಕಲ್, ಕೊಟ್ಟಿಗೆಹಾರ, ಕೊಪ್ಪ, ಮೂಡಿಗೆರೆ, ಹೊನ್ನಾಳಿ, ತುಮಕೂರು, ಕೊರಟಗೆರೆ, ಮಧುಗಿರಿ, ಮಿಡಿಗೇಶಿ, ಚಿಕ್ಕನಹಳ್ಳಿಯಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.