ADVERTISEMENT

ಪಾಟೀಲರಂಥವರು ಎಷ್ಟೋ ಜನರಿದ್ದಾರೆ, ಎಲ್ಲರನ್ನೂ ಡಿಸಿಎಂ ಮಾಡೋಕೆ ಆಗುತ್ತಾ?

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 13:06 IST
Last Updated 11 ಜೂನ್ 2018, 13:06 IST
ವೆಂಕಟರಮಣಪ್ಪ
ವೆಂಕಟರಮಣಪ್ಪ   

ತುಮಕೂರು: ಎಂ.ಬಿ.ಪಾಟೀಲ್‌ ಅವರಂತಹವರು ಪಕ್ಷದಲ್ಲಿ ಬಹಳಷ್ಟು ಮುಖಂಡರು ಇದ್ದಾರೆ. ಎಲ್ಲರನ್ನೂ ಉಪಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.

ನಗರದ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಬಳಿಕೆ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿ, ಪಾಟೀಲರ ಹಿಂದೆ ಸುಮಾರು 15 ಶಾಸಕರು ಇದ್ದಾರೆ ಎನ್ನುವುದು ಸುಳ್ಳ ಮಾಹಿತಿ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಇರುವುದೇ ಆರೋಪ ಮಾಡುವುದಕ್ಕೆ. ಅದರ ಬಗ್ಗೆ ಹೇಳುವ ಅವಶ್ಯಕ ಇಲ್ಲ. ಸಮ್ಮಿಶ್ರ ಸರ್ಕಾರ 5 ವರ್ಷಗಳ ಕಾಲ ಸುಭದ್ರವಾಗಿ ಕಾರ್ಯನಿರ್ವಹಿಸುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.