ADVERTISEMENT

ಪಿಯು ಉಪನ್ಯಾಸಕರ ನೇಮಕ: 30ರ ವರೆಗೂ ಅರ್ಜಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2015, 19:30 IST
Last Updated 13 ಜೂನ್ 2015, 19:30 IST
ಪಿಯು ಉಪನ್ಯಾಸಕರ ನೇಮಕ: 30ರ ವರೆಗೂ ಅರ್ಜಿಗೆ ಅವಕಾಶ
ಪಿಯು ಉಪನ್ಯಾಸಕರ ನೇಮಕ: 30ರ ವರೆಗೂ ಅರ್ಜಿಗೆ ಅವಕಾಶ   

ಬೆಂಗಳೂರು: ‘ಪದವಿ ಪೂರ್ವ ಕಾಲೇ ಜುಗಳ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ’ ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಅವರು ಶನಿವಾರ ಸುದ್ದಿಗಾರರ ಜತೆ ಮಾತ ನಾಡಿದರು. 

‘ದ್ವಿತೀಯ ಪಿ.ಯು. ಉತ್ತರ ಪತ್ರಿಕೆಗಳ  ಮೌಲ್ಯಮಾಪನ ಹಾಗೂ ಮರು ಎಣಿಕೆ  ಸಮರೋಪಾದಿಯಲ್ಲಿ ನಡೆಯುತ್ತಿದೆ.  ಈಗಾಗಲೇ 30 ಸಾವಿ ರಕ್ಕೂ ಅಧಿಕ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಪೂರ್ಣ ಗೊಂಡಿದೆ. ಜೂನ್‌ 19ರ ಒಳಗೆ ಎಲ್ಲಾ ಫಲಿತಾಂಶ ಗಳು ಹೊರಬೀಳಲಿವೆ’ ಎಂದರು.  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜುಲೈ 15ರೊಳಗೆ ಸೈಕಲ್‌  ವಿತರಿಸಲಾಗು ವುದು. ಬೆಂಗಳೂರು ಹಾಗೂ ಮೈಸೂ ರು ವಲಯದಲ್ಲಿ ಶಾಲಾ ವಿದ್ಯಾರ್ಥಿಗಳಗೆ ಸಮವಸ್ತ್ರ ವಿತರಿಸ ಲಾಗಿದೆ.

ಬೆಳಗಾವಿ ಹಾಗೂ ಕಲಬುರ್ಗಿ ವಲಯದಲ್ಲಿ ಸಮ ವಸ್ತ್ರ   ವಿತರಣೆ  ಪ್ರಗತಿಯಲ್ಲಿದೆ ಎಂದರು.

* ಸಂಪುಟದಿಂದ ನನ್ನನ್ನು ಕೈ ಬಿಡಲಾಗುತ್ತದೆ ಎಂಬುದು ಬರೀ ಊಹಾಪೋಹ, ಸತ್ಯಕ್ಕೆ ದೂರ.
-ಕಿಮ್ಮನೆ ರತ್ನಾಕರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.