ADVERTISEMENT

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ: ವಿದ್ಯಾರ್ಥಿಗಳ ಅನಿಸಿಕೆ...

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಮನೋಜ್‌ ಕುಮಾರ್ ಅಸ್ಟಗಿ ಗುರುಮಠಕಲ್
ಮನೋಜ್‌ ಕುಮಾರ್ ಅಸ್ಟಗಿ ಗುರುಮಠಕಲ್   

ಕಷ್ಟಕಾಲದಲ್ಲಿ ಸಹಾಯ

ಕಷ್ಟ ಕಾಲದಲ್ಲಿ ‘ಪ್ರಜಾವಾಣಿ’ ಕೈಹಿಡಿದಿದ್ದರಿಂದಲೇ ಕಲಬುರ್ಗಿಯ ಶರಣಬಸವೇಶ್ವರ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ 82ರಷ್ಟು ಅಂಕ ಪಡೆಯುವಂತಾಯಿತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಇದೆ. ಆರ್ಥಿಕ ತೊಂದರೆಯಿಂದಾಗಿ ಮಾನಸಿಕವಾಗಿ ಕುಸಿದಿದ್ದೆ. ಇಂತಹ ಸಮಯದಲ್ಲಿ ‘ಪ್ರಜಾವಾಣಿ’ ನೆರವು ನೀಡಿ ಪ್ರೋತ್ಸಾಹಿಸಿತು.

– ಮನೋಜ್‌ ಕುಮಾರ್ ಅಸ್ಟಗಿ ಗುರುಮಠಕಲ್, ಯಾದಗಿರಿ ಜಿಲ್ಲೆ

ADVERTISEMENT

ಸಮಾಜಮುಖಿ ಪ್ರಯತ್ನ

‘ಪ್ರಜಾವಾಣಿ’ ಪತ್ರಿಕೆಯ ಶೈಕ್ಷಣಿಕ ನೆರವು ನಿಧಿಯು ನನ್ನ ಶೈಕ್ಷಣಿಕ ಬದುಕಿಗೆ ಆಧಾರ ಸ್ತಂಭವಾಯಿತು. ಕಷ್ಟ ಕಾಲದಲ್ಲಿ ಪತ್ರಿಕೆಯು ನೀಡಿದ ಹಣಕಾಸು ನೆರವಿನಿಂದ ಬಂಗಾರಪೇಟೆ ಪಟ್ಟಣದ ಎಸ್‌ಡಿಸಿ ಕಾಲೇಜಿಗೆ ಸೇರಿ ಶಿಕ್ಷಣ ಮುಂದುವರಿಸಿದ್ದೇನೆ. ಪ್ರತಿಭಾವಂತರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿರುವ ಪತ್ರಿಕೆಯ ಸಮಾಜಮುಖಿ ಪ್ರಯತ್ನ ಶ್ಲಾಘನೀಯ.

– ಇ.ಎನ್‌.ರಕ್ಷಿತಾ, ಬಂಗಾರಪೇಟೆ, ಕೋಲಾರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.