ADVERTISEMENT

ಪ್ರೇಮ ಪತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 19:59 IST
Last Updated 1 ಜನವರಿ 2013, 19:59 IST

ಜೀವನವಿಡೀ ಪತ್ರ ವ್ಯವಹಾರವನ್ನೇ ಮಾಡದಿರುವವರೂ ಬರೆದಿರುವ, ಬರೆಯಬೇಕಾದ ಪತ್ರವೆಂದರೆ ಪ್ರೇಮ ಪತ್ರ. ಯುವ ಮನಸ್ಸುಗಳ ಸೃಜನಶೀಲತೆ ಅದರ ಉತ್ತುಂಗವನ್ನು ತಲುಪುವುದೇ ಪ್ರೇಮವನ್ನು ನಿವೇದಿಸಿಕೊಳ್ಳುವ ಪ್ರಕ್ರಿಯೆಯಲ್ಲಿ. ಹೀಗೆ ಬರೆದ ಪತ್ರಗಳು ಪ್ರಿಯತಮೆ/ಪ್ರಿಯತಮನ ಮನಸ್ಸನ್ನು ಗೆಲ್ಲದೇ ಇರಬಹುದಾದರೂ ಸಹೃದಯರ ಮನಸ್ಸನ್ನಂತೂ ಗೆಲ್ಲುವ ಶಕ್ತಿಯನ್ನು ಹೊಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ `ಪ್ರಜಾವಾಣಿ' ಪ್ರೇಮ ಪತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಬಹುಮಾನಗಳು ಈ ಕೆಳಗಿನಂತಿರುತ್ತವೆ.

ಮೊದಲ ಬಹುಮಾನ : ರೂ.3000
ಎರಡನೇ ಬಹುಮಾನ : ರೂ.2000
ಮೂರನೇ ಬಹುಮಾನ : ರೂ.1000


ಬಹುಮಾನ ವಿಜೇತ ಪತ್ರಗಳು ಫೆ.14ರಂದು `ಕಾಮನಬಿಲ್ಲು' ಪುರವಣಿಯಲ್ಲಿ ಪ್ರಕಟವಾಗುತ್ತವೆ. ಪ್ರೇಮಪತ್ರ 600 ಪದಗಳನ್ನು ಮೀರಬಾರದು. ಪತ್ರದ ಜೊತೆಗೆ ನಿಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಒಂದು ಫೋಟೋ ಇರಲಿ. ಪತ್ರಗಳು ಜನವರಿ 31ಕ್ಕೆ ಮೊದಲು ಪ್ರಜಾವಾಣಿ ಕಚೇರಿ ತಲುಪಬೇಕು. ಕಳುಹಿಸಬೇಕಾದ ವಿಳಾಸ: ಪ್ರೇಮ ಪತ್ರ ಸ್ಪರ್ಧೆ, `ಕಾಮನಬಿಲ್ಲು' ವಿಭಾಗ, ಪ್ರಜಾವಾಣಿ,  ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-01. ಇ-ಮೇಲ್: premapathra@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.