
ಪ್ರಜಾವಾಣಿ ವಾರ್ತೆಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಘನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೀಪಂಕರ್ ದಾಸ್ ಶರ್ಮಾ ಅವರಿಗೆ ಸ್ವೀಡನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ.
ಈ ಗೌರವ ಪಡೆದ ಭಾರತದ ಎರಡನೇ ಸಾಧಕ ಎಂಬ ಹಿರಿಮೆಗೆ ಪ್ರೊ. ಶರ್ಮಾ ಪಾತ್ರವಾಗಿದ್ದಾರೆ. ಸ್ವೀಡನ್ ವಿ.ವಿಯ ಹಲವು ಸಂಶೋಧನಾ ಕಾರ್ಯಗಳಲ್ಲಿ ಐಐಎಸ್‌ಸಿ ಪರವಾಗಿ ಅವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.