ADVERTISEMENT

ಬಯಲಾಟಕ್ಕೆ ಶ್ರೀರಾಮ ಇಟ್ಟಣ್ಣನವರ, ಯಕ್ಷಗಾನಕ್ಕೆ ಎಂ.ಎ. ಹೆಗಡೆ‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST
ಎಂ.ಎ. ಹೆಗಡೆ- ಶ್ರೀರಾಮ ಇಟ್ಟಣ್ಣನವರ್
ಎಂ.ಎ. ಹೆಗಡೆ- ಶ್ರೀರಾಮ ಇಟ್ಟಣ್ಣನವರ್   

ಬೆಂಗಳೂರು: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯನ್ನು ಪ್ರತ್ಯೇಕಿಸಿರುವ ರಾಜ್ಯ ಸರ್ಕಾರ, ಎರಡೂ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ.

ಬಾಗಲಕೋಟೆಯಲ್ಲಿ ಆರಂಭವಾಗಲಿರುವ ಕರ್ನಾಟಕ ಬಯಲಾಟ ಅಕಾಡೆಮಿಗೆ ಅಧ್ಯಕ್ಷರಾಗಿ ಬಾಗಲಕೋಟೆಯ ಶ್ರೀರಾಮ ಇಟ್ಟಣ್ಣನವರ, ಯಕ್ಷಗಾನ ಅಕಾಡೆಮಿಗೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಎಂ.ಎ. ಹೆಗಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಯಲಾಟ ಅಕಾಡೆಮಿ ಸದಸ್ಯರು:

ADVERTISEMENT

ಹಾ.ಮಾ. ನಾಗಾರ್ಜುನ (ಶಿವಮೊಗ್ಗ), ಟಿ. ಗೋವಿಂದರಾಜು (ಬೆಂಗಳೂರು), ಗುಂಡೂರಾಜ್ (ಹಾಸನ), ಬಳೆ ಗೌರಮ್ಮ (ರಾಮನಗರ), ಜಿ.ಕೆ. ತಿಪ್ಪೇಸ್ವಾಮಿ (ಬಳ್ಳಾರಿ), ಸಂಜೀವ್‌ಕುಮಾರ್ ಜುಮ್ಮ (ಬೀದರ್), ಅಶೋಕ ಆತ್ಮಾರಾಮ ಸುತಾರ (ಗದಗ), ಬಾಪು ಶೌಕತ ತಾಸೇವಾಲೆ (ಬೆಳಗಾವಿ), ಸುಂದರವ್ವ ಮೇತ್ರಿ ಚಿಮ್ಮಡ್ (ಬಾಗಲಕೋಟೆ), ಮುತ್ತವ್ವ ಮಾದಾರ (ಬಾಗಲಕೋಟೆ), ಶಿವಪುತ್ರ ಈರಪ್ಪ ಕಾಲತಿಪ್ಪಿ(ಬೆಳಗಾವಿ), ಎಸ್.ಎನ್. ಮುತ್ತಯ್ಯ(ದಾವಣಗೆರೆ).

ಯಕ್ಷಗಾನ ಅಕಾಡೆಮಿ ಸದಸ್ಯರು:

ಜಲವಳ್ಳಿ ವೆಂಕಟೇಶ್‌ ರಾವ್ (ಉತ್ತರ ಕನ್ನಡ), ರಾಮಕೃಷ್ಣ ಗುಂದಿ (ಅಂಕೋಲ, ಉತ್ತರ ಕನ್ನಡ), ಪ್ರಭಾಕರ ಭಂಡಾರಿ (ಉತ್ತರ ಕನ್ನಡ), ಜಬ್ಬಾರ್ ಸಮೋ (ಸುಳ್ಯ, ದಕ್ಷಿಣ ಕನ್ನಡ), ಪುಷ್ಪರಾಜ ಜೋಗಿ (ದಕ್ಷಿಣ ಕನ್ನಡ), ಎಂ. ದಾಮೋದರ ಶೆಟ್ಟಿ (ಕಾಸರಗೋಡು), ಲೀಲಾವತಿ (ದಕ್ಷಿಣ ಕನ್ನಡ), ಅಶ್ವಿನಿ ಕೊಂಡದಕುಳಿ (ಉಡುಪಿ), ಬೊಟ್ಟಿಕೆರೆ ಪುರುಷೋತ್ತಮ ಪೂಂಜ (ದಕ್ಷಣ ಕನ್ನಡ), ರಾಧಾಕೃಷ್ಣ ಉರಾಳ (ಬೆಂಗಳೂರು), ಐರೋಡಿ ರಾಜಶೇಖರ ಹೆಬ್ಬಾರ (ಉಡುಪಿ), ಪುರುಷೋತ್ತಮಗೌಡ (ಮೈಸೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.