
ಪ್ರಜಾವಾಣಿ ವಾರ್ತೆಬೆಂಗಳೂರು: ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ ನೀಡುವ ‘ಪ್ರೊ. ಬರಗೂರು ಪುಸ್ತಕ ಪ್ರಶಸ್ತಿ’ಗೆ ಕಾದಂಬರಿ ಮತ್ತು ವಿಚಾರ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕಾದಂಬರಿ ಅಥವಾ ವಿಚಾರ ಸಾಹಿತ್ಯ ಕೃತಿ 2014ರಲ್ಲಿ ಪ್ರಕಟವಾಗಿರಬೇಕು. ಆಯ್ಕೆಯಾಗುವ ಪುಸ್ತಕಗಳಿಗೆ ತಲಾ ₹ 10 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಕಾದಂಬರಿ, ವಿಚಾರ ಸಾಹಿತ್ಯ ಕೃತಿಯ ತಲಾ ಎರಡು ಪ್ರತಿಗಳನ್ನು ‘ಡಾ. ಲಕ್ಷ್ಮೀನಾರಾಯಣ ಎ.ವಿ, ಬೆಳಕು, 2453, 3ನೇ ಬ್ಲಾಕ್, ದೊಡ್ಡಬಸ್ತಿ ರಸ್ತೆ, ವಿಶ್ವೇಶ್ವರಯ್ಯ ಲೇಔಟ್, ಬೆಂಗಳೂರು, 560 110’ ವಿಳಾಸಕ್ಕೆ ಅಕ್ಟೋಬರ್ 10ರೊಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ 99646 40890 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.