ADVERTISEMENT

ಬಸವಾದಿ ಪ್ರಮಥರು ಪ್ರತಿಪಾದಿಸಿದ್ದು ‘ಶರಣಧರ್ಮ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ತುಮಕೂರು: ವಚನಗಳಲ್ಲಿ ಶರಣರು ಗುರುತಿಗೆ ಬಳಸಿರುವುದು ‘ಶರಣ’ ಎಂಬ ಪದ. ಹೀಗಾಗಿ, ಬಸವಾದಿ ಪ್ರಮಥರು ಪ್ರತಿಪಾದಿಸಿದ್ದು ಶರಣ ಧರ್ಮ’ ಎಂದು ಲೇಖಕ ಎಚ್.ಎಸ್.ಶಿವಪ್ರಕಾಶ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ 6 ದಾರ್ಶನಿಕರ ಅಧ್ಯಯನ ಪೀಠ ಉದ್ಘಾಟಿಸಿ ಮಾತನಾಡಿದರು.

‘ವಚನಗಳಲ್ಲಿ ಲಿಂಗಾಯತ ಎನ್ನುವ ಶಬ್ದ ಪ್ರಯೋಗ ಬಹಳ ಕಡಿಮೆ ಇದೆ. ವೀರಶೈವ ಎನ್ನುವ ಪ್ರಯೋಗ ಸ್ವಲ್ಪ ಜಾಸ್ತಿ ಇದೆ’ ಎಂದು ಹೇಳಿದರು.

ADVERTISEMENT

’ಈಗ ನಮ್ಮ ರಾಜ್ಯದಲ್ಲಿ ಲಿಂಗಾಯತರು, ವೀರಶೈವರು ಎನ್ನುವ ಬೀದಿ ಕಾಳಗ ನಡೆಯುತ್ತಿದೆ. ಈ ಬೀದಿ ಕಾಳಗವನ್ನು ಅದರ ಪಾಡಿಗೆ ಬಿಟ್ಟು ಶರಣರ ವಚನಗಳನ್ನು ನಾವು ಗಮನಿಸಬೇಕು. ಶರಣತತ್ವದ ವ್ಯಾಪ್ತಿ ಬಹಳ ದೊಡ್ಡದಾಗಿದೆ’ ಎಂದು ಹೇಳಿದರು.

’ಶರಣ ಚೌಕಟ್ಟಿನಲ್ಲಿ ನೋಡಿದಾಗ ಚಾರಿತ್ರಿಕ ಸಮನ್ವಯವನ್ನು ಸ್ಥಾಪಿಸಿದ ಬಸವೇಶ್ವರರ ಚಿಂತನೆ ಗೊತ್ತಾಗುತ್ತದೆ. 800 ವರ್ಷಗಳಿಂದ ಕನ್ನಡ ಸಂಸ್ಕೃತಿ ಮತ್ತೆ ಮತ್ತೆ ಬಸವೇಶ್ವರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದೆ’ ಎಂದು ತಿಳಿಸಿದರು.

’ಬಸವೇಶ್ವರ ಕನ್ನಡಿಗರಿಗೆ ನಿದ್ದೆ ಮಾಡಲು ಬಿಡುವುದಿಲ್ಲ. ಯಾವುದಾದರೂ ಒಂದು ಭಿನ್ನಾಭಿಪ್ರಾಯದಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುತ್ತಿರುತ್ತಾನೆ. ಯಾಕೆಂದರೆ ಬುದ್ಧ ತತ್ವದಷ್ಟೇ ಬಸವೇಶ್ವರ ತತ್ವವೂ ಅಗಾಧವಾದುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.