ADVERTISEMENT

ಬಿಎಸ್‌ವೈ, ರಾಜನಾಥ್‌ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಮುಖಂಡರು ಕೆಜೆಪಿ ಅಧ್ಯಕ್ಷ ಬಿ.ಎಸ್‌.­ಯಡಿಯೂರಪ್ಪ ಜತೆ ಸೋಮ­ವಾರ ಸೊರಬದ ಹೊಸ­ಬಾಳೆಯ ಆರ್‌­ಎಸ್‌ಎಸ್‌ ಮುಖಂಡ­ರೊಬ್ಬರ ಮನೆ­ಯಲ್ಲಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ. ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸ­­ಬಾಳೆ ಅವರ ತಾಯಿ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಪುಣ್ಯ­­­ಸ್ಮರಣೆ ಕಾರ್ಯದಲ್ಲಿ ಭಾಗ­ವಹಿ­ಸಲು ಬಂದಾಗ ಈ ಭೇಟಿ ನಡೆದಿದೆ.

ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ ನಂತರ ದತ್ತಾತ್ರೇಯ ಹೊಸಬಾಳೆ ನಿವಾಸದ ಸಮೀಪದಲ್ಲೇ ಇರುವ ಅವರ ಸಂಬಂಧಿಕರಾದ ಪದ್ಮನಾಭ ಅವರ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಹಾಗೂ ಯಡಿಯೂರಪ್ಪ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಮಾತುಕತೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಷಿ, ರಾಜ್ಯ­ಸಭಾ ಸದಸ್ಯ ಆಯನೂರು ಮಂಜು­ನಾಥ, ಸಂಸತ್‌ ಸದಸ್ಯ ಅನಂತ್ ಕುಮಾರ್, ಬಿ.ವೈ.ರಾಘವೇಂದ್ರ ಕೂಡ ಇದ್ದರು.

ಮಾತುಕತೆ ಮುಗಿಸಿ ಹೊರಗೆ ಬರು­ತ್ತಿದ್ದಂತೆ ಮುತ್ತಿಗೆ ಹಾಕಿದ  ಮಾಧ್ಯಮ­ಗಳಿಗೆ ರಾಜನಾಥ್ ಸಿಂಗ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಬಿ.ಎಸ್.­ಯಡಿಯೂರಪ್ಪ ‘ನಿಮ್ಮ ಕುತೂಹಲ ಅರ್ಥವಾಗುತ್ತದೆ. ಆದರೆ, ಇಲ್ಲಿ ರಾಜಕೀಯ ಮಾತುಕತೆ ನಡೆದಿಲ್ಲ. ಇನ್ನೂ ನಾಲ್ಕೈದು ದಿವಸ ಕಾದು ನೋಡಿ; ಸಿಹಿ ಸುದ್ದಿ ಸಿಗುತ್ತದೆ’ ಎಂದಷ್ಟೇ ಹೇಳಿ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.