ಹುಬ್ಬಳ್ಳಿ: ಧಾರವಾಡದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರತಿ ವರ್ಷವೂ ನೀಡುವ ಬೇಂದ್ರೆ ಗ್ರಂಥ ಬಹುಮಾನಕ್ಕೆ 40 ವರ್ಷದೊಳಗಿನದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾವ್ಯ, ಕಥೆ, ನಾಟಕ, ಕಾದಂಬರಿ, ಜೀವನಚರಿತ್ರೆ, ಲಲಿತ ಪ್ರಬಂಧ, ವಿಮರ್ಶೆ ಹಾಗೂ ಅನುವಾದ ಈ ಎಂಟು ಪ್ರಕಾರದ ಪುಸ್ತಕಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. 2011ರಲ್ಲಿ ತಮ್ಮ ಪುಸ್ತಕ ಪ್ರಕಟಿಸಿದ, 1971ರಲ್ಲಿ ಅಥವಾ ನಂತರದಲ್ಲಿ ಜನಿಸಿದ ಲೇಖಕ-ಲೇಖಕಿಯರ ಪುಸ್ತಕಗಳು ಬಹುಮಾನಕ್ಕೆ ಅರ್ಹವಾಗಿವೆ. ಪ್ರತಿ ಶೀರ್ಷಿಕೆಯ ನಾಲ್ಕು ಪ್ರತಿಗಳನ್ನು ಜನ್ಮದಾಖಲೆಯೊಂದಿಗೆ ಕಳಿಸಬೇಕು. ಇತರೆ ಲೇಖಕರು, ಪ್ರಾಜ್ಞರಾದ ಓದುಗರು ಹಾಗೂ ಪ್ರಕಾಶಕರು ಅರ್ಹ ಕೃತಿಗಳನ್ನು ಸೂಚಿಸಬಹುದಾಗಿದೆ.
ಲೇಖಕರು ತಮ್ಮ ಕೃತಿಗಳನ್ನು ಇದೇ ಜೂನ್ 30ರ ಒಳಗಾಗಿ `ಅಧ್ಯಕ್ಷರು, ಬೇಂದ್ರೆ ಸ್ಮಾರಕ ಗ್ರಂಥ ಬಹಮಾನ ಸಮಿತಿ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬೇಂದ್ರೆ ಭವನ, ಸಾಧನಕೇರಿ, ಧಾರವಾಡ-580008~ (ದೂರವಾಣಿ: 0836-2435327) ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.