ADVERTISEMENT

ಮತ್ತೊಂದು ನೈತಿಕ ಪೊಲೀಸ್‌ಗಿರಿ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 20:06 IST
Last Updated 5 ಜುಲೈ 2013, 20:06 IST

ಸುರತ್ಕಲ್:  ಪ್ರವಾಸ ಹೊರಟಿದ್ದ ಖಾಸಗಿ ಕಂಪೆನಿಯೊಂದರ ಐವರು ಪುರುಷ ಮತ್ತು ಮೂವರು ಮಹಿಳಾ ಉದ್ಯೋಗಿಗಳ ಮೇಲೆ ಸಂಘಟನೆಯೊಂದಕ್ಕೆ ಸೇರಿದ ಕೆಲವರು ಹಲ್ಲೆ ನಡೆಸಿದ ಘಟನೆ ಇಲ್ಲಿನ ಕೃಷ್ಣಾಪುರದಲ್ಲಿ ನಡೆದಿದೆ.

ಖಾಸಗಿ ಕಂಪೆನಿಯೊಂದರ ಈ ಉದ್ಯೋಗಿಗಳು ವಾಹನವೊಂದರಲ್ಲಿ ಮೈಸೂರಿಗೆ ಪ್ರವಾಸ ಹೊರಟಿದ್ದರು. ಪ್ರವಾಸ ಹೊರಟಿದ್ದವರು ತಮಗೆ ಅನುಕೂಲವಾದ ಸ್ಥಳದಲ್ಲಿ ವಾಹನ ಹತ್ತಿದ್ದರು. ಅದೇ ರೀತಿ ತಮ್ಮ ಜತೆ ಪ್ರವಾಸಕ್ಕೆ ಹೊರಟಿದ್ದ ಯುವತಿಯೊಬ್ಬರನ್ನು ಕರೆದೊಯ್ಯಲು ಅವರ ಮನೆ ಇರುವ ಕೃಷ್ಣಾಪುರಕ್ಕೆ ವಾಹನ ಬಂದಾಗ ಸಂಘಟನೆಯೊಂದರ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.