ADVERTISEMENT

ಮಹಿಷಿ ವರದಿ ಜಾರಿಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಬೆಂಗಳೂರು: ರಾಜ್ಯದ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ಡಾ. ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ ವಿನುತಾ ಎಂಬುವರು `ಸಂದೇಶ ಅಭಿಯಾನ~ ಆರಂಭಿಸಿದ್ದಾರೆ.

`ಸರೋಜಿನಿ ಮಹಿಷಿ ವರದಿಯ ಒಟ್ಟು 58 ಶಿಫಾರಸುಗಳಲ್ಲಿ 45 ಶಿಫಾರಸುಗಳನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಅನ್ಯಾಯ ವಾಗುತ್ತಿದೆ~ ಎಂದು ಅಭಿಯಾನದ ರೂವಾರಿ ವಿನುತಾ ದೂರಿದರು.

`ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಆಗುತ್ತಿರುವ ಅನ್ಯಾಯ ತಪ್ಪಿಸಲು ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಈ ವರದಿಯ ಬಗ್ಗೆ ರಾಜ್ಯದ ಅನೇಕರಿಗೆ ಹೆಚ್ಚಿನ ಮಾಹಿತಿ ಇಲ್ಲ. ವರ ದಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಈ ಸಂದೇಶ (ಎಸ್‌ಎಂಎಸ್) ಅಭಿಯಾನಕ್ಕೆ ಅಕ್ಟೋಬರ್ 17ರಂದು ಚಾಲನೆ ನೀಡಲಾಯಿತು. ಇಲ್ಲಿಯ ವರೆಗೆ ಸುಮಾರು 14 ಸಾವಿರ ಜನರು ಎಸ್‌ಎಂಎಸ್ ಕಳಿಸಿ ಅಭಿ ಯಾನಕ್ಕೆ ಬೆಂಬಲ ಸೂಚಿಸಿದ್ದಾರೆ~ ಎಂದು ಅವರು ತಿಳಿಸಿದರು.

`ಕನ್ನಡಿಗರಿಗೆ ಉದ್ಯೋಗ ಮೀಸ ಲಾತಿ ನೀಡುವಂತೆ 1986ರಲ್ಲಿ ಸರೋ ಜಿನಿ ಮಹಿಷಿ  ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈವರೆಗೂ ಈ ವರದಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬರದೇ ಇರುವುದು ದುರದೃಷ್ಟಕರ. ಈ ಬಗ್ಗೆ ಅರಿವು ಮೂಡಿಸಲು ಎಸ್‌ಎಂಎಸ್ ಅಭಿಯಾನದ ಜತೆಗೆ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು.  ಕನ್ನ ಡಿಗರೆಲ್ಲರೂ  ಈ ಅಭಿಯಾನಕ್ಕೆ ಬೆಂಬಲ ನೀಡಬೇಕು~ ಎಂದರು. 

ಈ ಅಭಿಯಾನಕ್ಕೆ ಬೆಂಬಲ ಸೂಚಿಸು ವವರು SAROJINI ಸ್ಪೇಸ್ ನಿಮ್ಮ ಹೆಸರು -ಸ್ಪೇಸ್- ಊರಿನ ಹೆಸರನ್ನು ಟೈಪ್ ಮಾಡಿ ಮೊಬೈಲ್ ಸಂಖ್ಯೆ 92430 00111 ಗೆ  ಎಸ್‌ಎಂಎಸ್ ಕಳಿಸಬೇಕು. (ಉದಾ: SAROJINI RAJESH BANGALORE) ಹೆಚ್ಚಿನ ಮಾಹಿತಿಗೆ sarojinireport@gmail.com  ಗೆ ಇ-ಮೇಲ್ ಕಳಿಸಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.