ADVERTISEMENT

ಮಾದರಿ ಸಂಸತ್ತು ಸ್ಪರ್ಧೆ ವಿಜೇತರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಹುಬ್ಬಳ್ಳಿ:  ಇಲ್ಲಿನ ಗುರುಸಿದ್ಧಪ್ಪ ಕೋತಂಬ್ರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎಸ್.ಎಸ್. ಶೆಟ್ಟರ ಸ್ಮಾರಕ `ಮಾದರಿ ಸಂಸತ್ತು~ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ವಫಾ ಸುಲ್ತಾನ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.

ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಜಿ. ಅಸ್ಮಾತುನ್ನೀಸಾ ದ್ವಿತೀಯ ಹಾಗೂ ಬೆಂಗಳೂರು ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿ ಗೌರವ್‌ಮೋಹನ್ ಮಿಶ್ರಾ ತೃತೀಯ ಬಹುಮಾನ ಪಡೆದರು.
ಸಂಸತ್‌ನ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ವಿಧಾಸಭೆ ಮಾಜಿ ಸ್ಪೀಕರ್ ಎಸ್. ರಮೇಶ್‌ಕುಮಾರ್ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.