ADVERTISEMENT

‘ಮೂಲಧರ್ಮವನ್ನು ಬಿಡುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:31 IST
Last Updated 17 ಏಪ್ರಿಲ್ 2018, 19:31 IST

ಬೆಂಗಳೂರು: ‘ನಾವು ಹುಟ್ಟಿನಿಂದ ಹಿಂದೂಗಳು. ಅಲ್ಪಸಂಖ್ಯಾತರಾಗಲು ತಯಾರಿಲ್ಲ. ಶಿಫಾರಸಿನಲ್ಲಿರುವ ನಮ್ಮ ಪಂಗಡದ ಹೆಸರನ್ನು ಕೂಡಲೇ ಕೈಬಿಡಬೇಕು’ ಎಂದು ಅಖಿಲ ಕರ್ನಾಟಕ ರಾಜ್ಯ ಯುವ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಶೇಖರ ಸಜ್ಜನ, ‘ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತ ಆಯೋಗದ ತಜ್ಞರ ಸಮಿತಿಯ ಅನ್ವಯ ಲಿಂಗಾಯತ/ವೀರಶೈವ ಲಿಂಗಾಯತಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. 94 ಒಳಪಂಗಡಗಳಲ್ಲಿ ಗಾಣಿಗ ಸಮುದಾಯವನ್ನು ಸೇರಿಸಲಾಗಿದೆ. ನಮ್ಮ ಗಮನಕ್ಕೆ ತರದೆ ಏಕಾಏಕಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ದೂರಿದರು.

‘ಶಾಲಾ ದಾಖಲಾತಿಗಳಲ್ಲಿ ಹಿಂದೂ ಗಾಣಿಗ ಎಂದಿದೆ. ನಮ್ಮ ಒಪ್ಪಿಗೆ ಇಲ್ಲದೆ ಲಿಂಗಾಯತ ಗಾಣಿಗ/ಗಾಣಿಗೇರ, ಲಿಂಗಾಯತ ಸಜ್ಜನ/ಸಜ್ಜನ ಗಾಣಿಗೇರ, ಲಿಂಗಾಯತ ಕರಿಗಾಣಿಗರು ಎಂದು ಬರೆಯಲಾಗಿದೆ. ಇದು ಕಾನೂನು ಬಾಹೀರ ಕೆಲಸ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.