ADVERTISEMENT

ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:35 IST
Last Updated 17 ಫೆಬ್ರುವರಿ 2011, 17:35 IST

ಬೆಂಗಳೂರು: ರಾಜ್ಯದ ಒಂಬತ್ತು ಮಹಾನಗರ ಪಾಲಿಕೆಗಳ ಹದಿನಾಲ್ಕನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಗುರುವಾರ ನಗರಾಭಿವೃದ್ಧಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಈಗ ಹನ್ನೊಂದನೇ ಅವಧಿ ನಡೆಯುತ್ತಿದೆ. ಆದ್ದರಿಂದ ಇನ್ನೂ ಎರಡು ಅವಧಿ ಮುಗಿದ ಬಳಿಕ ಈಗ ನಿಗದಿ ಆಗಿರುವ ಮೀಸಲಾತಿ ಅನ್ವಯವಾಗುತ್ತದೆ. ತುಮಕೂರು ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದು, ಚುನಾವಣೆ ಮುಗಿದ ಬಳಿಕ ಈಗ ನಿಗದಿ ಆಗಿರುವ ಮೀಸಲಾತಿಯಂತೆ ಮೊದಲ ಬಾರಿಗೆ ಮೇಯರ್, ಉಪ ಮೇಯರ್ ಹುದ್ದೆಗೆ ಆಯ್ಕೆ ನಡೆಯಲಿದೆ.

ಬಿಬಿಎಂಪಿಯಲ್ಲಿ ಮುಂದಿನ ಅವಧಿಗೆ ಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪ ಮೇಯರ್ ಹುದ್ದೆಯನ್ನು ಹಿಂದುಳಿದ ವರ್ಗ-ಎಗೆ ನಿಗದಿ ಮಾಡಲಾಗಿದೆ. 13ನೇ ಅವಧಿಗೆ ಮೇಯರ್ ಬಿಸಿಎಂ-ಎಗೆ ಮತ್ತು ಉಪ ಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಾಗಲಿದೆ.

ರಾಜ್ಯದ ಬಹುತೇಕ ಮಹಾನಗರ ಪಾಲಿಕೆಗಳಲ್ಲಿ 13ನೇ ಅವಧಿಯ ಮೇಯರ್, ಉಪ ಮೇಯರ್ ಅವಧಿ ಅಂತ್ಯಗೊಳ್ಳುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮತ್ತು ಮಂಗಳೂರಿನಲ್ಲಿ ಫೆಬ್ರುವರಿ 25ರಂದು, ಬಳ್ಳಾರಿಯಲ್ಲಿ ಫೆ. 28ರಂದು, ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ 5, ಗುಲ್ಬರ್ಗದಲ್ಲಿ ಮಾ. 7, ಬೆಳಗಾವಿಯಲ್ಲಿ ಮಾರ್ಚ್ 29 ಚುನಾವಣೆ ನಿಗದಿಯಾಗಿದೆ. ಮೈಸೂರು ಮಹಾನಗರ ಪಾಲಿಕೆಗೆ ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

 ಮೀಸಲಾತಿ ವಿವರ

ಪಾಲಿಕೆ        ಮೇಯರ್                  ಉಪ ಮೇಯರ್
ಬೆಂಗಳೂರು  ಸಾಮಾನ್ಯ-ಮಹಿಳೆ        ಹಿಂದುಳಿದ ವರ್ಗ-ಎ
ಬೆಳಗಾವಿ     ಪರಿಶಿಷ್ಟ ಜಾತಿ- ಮಹಿಳೆ   ಸಾಮಾನ್ಯ
ಬಳ್ಳಾರಿ     ಸಾಮಾನ್ಯ                  ಹಿಂದುಳಿದ ವರ್ಗ-ಎ ಮಹಿಳೆ
ದಾವಣಗೆರೆ ಹಿಂದುಳಿದ ವರ್ಗ-ಎ        ಹಿಂದುಳಿದ ವರ್ಗ-ಬಿ ಮಹಿಳೆ
ಗುಲ್ಬರ್ಗ     ಸಾಮಾನ್ಯ                 ಪರಿಶಿಷ್ಟ ಜಾತಿ
ಹುಬ್ಬಳ್ಳಿ-    ಧಾರವಾಡ ಸಾಮಾನ್ಯ ಮಹಿಳೆ  ಹಿಂದುಳಿದ ವರ್ಗ-ಎ
ಮಂಗಳೂರು  ಪರಿಶಿಷ್ಟ ಜಾತಿ            ಸಾಮಾನ್ಯ ಮಹಿಳೆ
ಮೈಸೂರು   ಹಿಂದುಳಿದ ವರ್ಗ-ಎ ಮಹಿಳೆ  ಸಾಮಾನ್ಯ
ತುಮಕೂರು   ಸಾಮಾನ್ಯ              ಪರಿಶಿಷ್ಟ ಪಂಗಡ ಮಹಿಳೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT