ಹುಬ್ಬಳ್ಳಿ: ಯಶವಂತಪುರ–ಮೀರಜ್ (ನಂ. 06517/06518) ವಿಶೇಷ ರೈಲು ಸಂಚಾರವನ್ನು ಇದೇ 23ರಿಂದ ಜನವರಿ 1ರವರೆಗೆ (ಎರಡು ಕಡೆಯಿಂದ ತಲಾ ಐದು ಸಂಚಾರ) ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಈ ರೈಲು ಭಾನುವಾರ, ಮಂಗಳವಾರ ಹಾಗೂ ಗುರುವಾರದಂದು ರಾತ್ರಿ 8.40ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.05ಕ್ಕೆ ಮೀರಜ್ ತಲುಪಲಿದೆ. ಮೀರಜ್‌ನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮಧ್ಯಾಹ್ನ 4.45ಕ್ಕೆ ಹೊರಟು ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ಸೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.