ADVERTISEMENT

ಯಶವಂತಪುರ ಎಕ್ಸ್‌ಪ್ರೆಸ್‌: ಸಂಚಾರ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಹುಬ್ಬಳ್ಳಿ:  ಯಶವಂತಪುರ–ಮಿರಜ್‌–ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಜುಲೈ 1ರವರೆಗೆ ಮುಂದುವರಿಸಿ­ರುವುದಾಗಿ ನೈರುತ್ಯ ರೈಲ್ವೆ ಪ್ರಕಟಣೆ­ಯಲ್ಲಿ ತಿಳಿಸಿದೆ.

ವಾರಕ್ಕೆ ಎರಡು ಬಾರಿ ಸಂಚರಿ­ಸುವ ಈ ರೈಲು (06517) ನೂತನ ವೇಳಾಪಟ್ಟಿಯಂತೆ ಯಶವಂತಪುರ­ದಿಂದ   ಪ್ರತಿ ಸೋಮವಾರ ಹಾಗೂ ಗುರುವಾರದಂದು ರಾತ್ರಿ 8.40ಕ್ಕೆ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕುಡಚಿ ಮಾರ್ಗವಾಗಿ ಮರುದಿನ ಬೆಳಿಗ್ಗೆ 10.15ಕ್ಕೆ ಮಿರಜ್‌  ತಲುಪಲಿದೆ.

ಮಿರಜ್‌ನಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಸಂಜೆ 4.45ಕ್ಕೆ ಹೊರಡುವ ರೈಲು (06518)  ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಒಟ್ಟು ಎರಡು ಹವಾನಿಯಂತ್ರಿತ ಬೋಗಿ, ಎಂಟು ದ್ವಿತೀಯ ದರ್ಜೆ ಸ್ಲೀಪರ್ ಬೋಗಿ, ಆರು ಸಾಮಾನ್ಯ ದರ್ಜೆ ಬೋಗಿ ಹಾಗೂ ಎರಡು ದ್ವಿತೀಯ ದರ್ಜೆ ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.