ಬೆಂಗಳೂರು (ಪಿಟಿಐ): ಆಗಸ್ಟ್ 27ರಂದು ಉಡಾವಣೆ ಮಾಡಲಾಗಿದ್ದ ಭಾರತದ 25ನೇ ಭೂಸ್ಥಿರ ಸಂವಹನ ಉಪಗ್ರಹ ಜಿಸ್ಯಾಟ್–6 ಅನ್ನು ಯಶಸ್ವಿಯಾಗಿ ನಿಗದಿತ ಕಕ್ಷಾ ಸ್ಥಾನ ತಲುಪಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ತಿಳಿಸಿದೆ.
‘ಜಿಸ್ಯಾಟ್–6 ಉಪಗ್ರಹವನ್ನು ಭಾನುವಾರ ಮುಂಜಾನೆ ನಿರ್ದಿಷ್ಟ ಕಕ್ಷಾ ಸ್ಥಾನಕ್ಕೆ ಯಶಸ್ವಿಯಾಗಿ ಸೇರಿಸಲಾಗಿದೆ. ಇದಕ್ಕೂ ಮೊದಲು ನಾಲ್ಕು ಬಾರಿ ಪಥ ಬದಲಿಸಲಾಯಿತು. ಇನ್ನು, ಜಿಸ್ಯಾಟ್6 ಉಪಗ್ರಹವು ಇನ್‌ಸ್ಯಾಟ್4ಎ, ಜಿಸ್ಯಾಟ್12, ಜಿಸ್ಯಾಟ್10 ಹಾಗೂ ಐಆರ್‌ಎನ್‌ಎಸ್‌ಎಸ್1ಸಿ ಉಪಗ್ರಹಗಳಿಗೆ ಜತೆಯಾಗಿದೆ’ ಎಂದು ಇಸ್ರೋ ತಿಳಿಸಿದೆ.
ತಮಿಳುನಾಡಿನ ಶ್ರೀಹರಿಕೋಟಾದಿಂದ ಆಗಸ್ಟ್27ರಂದು ಜಿಸ್ಯಾಟ್ 6 ಉಪಗ್ರಹವನ್ನು ಕ್ರಯೋಜನಿಕ್ ಎಂಜಿನ್ ಹೊಂದಿರುವ ಜಿಎಸ್‌ಎಲ್‌ವಿ–ಡಿ6 ಉಡಾವಣಾ ವಾಹನದಲ್ಲಿಟ್ಟು ನಭಕ್ಕೆ ಚಿಮ್ಮಿಸಲಾಗಿತ್ತು.
ಇದು ಉಪಗ್ರಹ ಜಿಸ್ಯಾಟ್ ಸರಣಿಯಲ್ಲಿ 12ನೆಯದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.