ADVERTISEMENT

‘ಯಾರೂ 24 ಕ್ಯಾರೆಟ್‌ ಅಪರಂಜಿಗಳಲ್ಲ’

ಭ್ರಷ್ಟಾಚಾರ ಕುರಿತ ಹೇಳಿಕೆಗೆ ಕೃಷ್ಣಭೈರೇಗೌಡ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
‘ಯಾರೂ 24 ಕ್ಯಾರೆಟ್‌ ಅಪರಂಜಿಗಳಲ್ಲ’
‘ಯಾರೂ 24 ಕ್ಯಾರೆಟ್‌ ಅಪರಂಜಿಗಳಲ್ಲ’   

ಬೆಂಗಳೂರು: ಭ್ರಷ್ಟಾಚಾರ ಮಾಡುವುದಿಲ್ಲ, ತಾವು 24 ಕ್ಯಾರೆಟ್‌ ಅಪರಂಜಿ ಎಂದು ರಾಜಕೀಯದಲ್ಲಿ ಯಾರೊಬ್ಬರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಆ ರೀತಿ ಹೇಳಿದರೆ ಅದು ಆತ್ಮವಂಚನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಗರದ ಗಾಂಧಿ ಭವನದಲ್ಲಿ ಸೋಮವಾರ ಮಾತನಾಡುವಾಗ, ‘ಭ್ರಷ್ಟಾಚಾರದ ನಿರ್ಮೂಲನೆ ಕಷ್ಟ. ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ’ ಎಂಬುದಾಗಿ ನೀಡಿರುವ ಹೇಳಿಕೆಯ ಬಗ್ಗೆ ಅವರ ಗಮನ ಸೆಳೆದಾಗ ಮೇಲಿನಂತೆ ತಿಳಿಸಿದರು.

‘ಭ್ರಷ್ಟಾಚಾರ ಎಲ್ಲ ಹಂತಗಳಲ್ಲೂ ಇದೆ. ಯಾರಾದರೂ ತಾವು ಭ್ರಷ್ಟಾಚಾರ ಮುಕ್ತ ಎಂದು ಹೇಳಿಕೊಂಡರೆ, ಅದು ಆತ್ಮವಂಚನೆಯಾಗುತ್ತದೆ’ ಎಂದರು.

ADVERTISEMENT

‘ನಾವು ನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದರೆ, ಅದು ನಾವು ಜನರಿಗೆ ಕೊಡುವ ಕಾಣಿಕೆಯಾಗುತ್ತದೆ. ಬೇರೊಬ್ಬರ ಬಗ್ಗೆ ನಾನು ಏನೂ ಹೇಳುವುದಿಲ್ಲ. ವೈಯಕ್ತಿಕವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಬಗ್ಗೆ ಪ್ರಯತ್ನ ನಡೆಸುತ್ತೇನೆ’ ಎಂದು ಕೃಷ್ಣ ಭೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.