
ಬಳ್ಳಾರಿ: ‘ಪೊಲೀಸರ ಕ್ರೂರ ದೌರ್ಜನ್ಯಕ್ಕೆ ನಾನು ಬಲಿ ಆದೆರಿ. ನಮ್ ಜನ್ರಿಗೆ ಭಾಳ ಅನ್ಯಾಯ ಮಾಡ್ಯಾರ. ಅದ್ರ ಸಲುವಾಗ್ಯಾದ್ರೂ ನಾನು ಛೊಲೊತ್ನಗಿ ಓದಿ ಐಎಎಸ್ ಆಫೀಸರ್ ಆಕ್ಕೇನಿ’
ನವಲಗುಂದ ಗಲಾಟೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಹರಿಕೃಷ್ಣ ಹೆಬಸೂರ, ಯುಪಿಎಸ್‌ಸಿ ಪರೀಕ್ಷೆ ಬರೆಯಲೆಂದು ಶುಕ್ರವಾರ ಧಾರವಾಡಕ್ಕೆ ತೆರಳುವ ಮುನ್ನ ಸುದ್ದಿಗಾರರ ಮುಂದೆ ಹೇಳಿದ ಮಾತುಗಳಿವು.
ಪರೀಕ್ಷೆಗೆ ಹಾಜರಾಗಲು ನ್ಯಾಯಾಲಯದಿಂದ ಅನುಮತಿ ಪಡೆದಿರುವ ಅವರು ಮಧ್ಯಾಹ್ನ 2.15ರ ವೇಳೆಗೆ ಕಾರಾಗೃಹದಿಂದ ಹೊರ ಬಂದಾಗ, ತಾಯಿ ಸುಜಾತಾ ಮಗನನ್ನು ಅಪ್ಪಿಕೊಂಡು ಸಂತೈಸಿ, ಕೆನ್ನೆಗೆ ಮುತ್ತಿಟ್ಟರು.
ಈ ಸನ್ನಿವೇಶಕ್ಕೆ ಸಾಕ್ಷಿಯಾದ ಸುದ್ದಿಗಾರರಿಗೆ ಹರಿಕೃಷ್ಣ, ತಮ್ಮ ಬಂಧನವಾದ ದಿನದ ಘಟನೆಯನ್ನು ವಿವರಿಸಿದರು.ಲ‘ಮಧ್ಯಾಹ್ನ ಮೂರು ಗಂಟೆ ಆಗಿತ್ರಿ. ಕರೆಂಟ್ ಹೋಗಿತ್ತು.
ಹಾಲ್‌ನ್ಯಾಗ ನಾನು ಓದಕೊಂತ ಕುಂತಿದ್ದೆ. ನನ್ ಕಾಟ್ ಮೇಲೆ ಪುಸ್ತಕ ಇತ್ತು. ಮನಿ ಒಳಗ ನುಗ್ಗಿದ ಒಬ್ಬ ಪಿಎಸ್‌ಐ ಮತ್ತ ಏಳೆಂಟು ಮಂದಿ ಕಾನ್‌ಸ್ಟೆಬಲ್‌ಗಳು ಮನೆಯಿಂದಲೇ ಎಳ್ಕೊಂಡು ಹೋದ್ರು. ನಮ್ಮವ್ವಾರ್‍ನ ಒದ್ದು, ನನ್ನ ಪೊಲೀಸ್ ಜೀಪನ್ಯಾಗ ಹಾಕ್ಕೊಂಡ್ ಹೋದ್ರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.