ADVERTISEMENT

ರಸ್ತೆಗೆ ಹಸುಗೂಸು ಬಿಸಾಡಿದ ತಾಯಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:51 IST
Last Updated 23 ಏಪ್ರಿಲ್ 2018, 19:51 IST

ಶಿವಮೊಗ್ಗ: ನಗರದ ಪೆನ್ಷನ್‌ ಮೊಹಲ್ಲಾ ರಸ್ತೆಯ ಚರಂಡಿ ಬಳಿ ನಾಲ್ಕು ದಿನಗಳ ಹಸುಗೂಸು ಪತ್ತೆಯಾಗಿದೆ.

ಬೆಳಗಿನ ಜಾವ 5.45ರ ಸುಮಾರಿಗೆ ಪುರುಷನೊಂದಿಗೆ ಬಂದ ಚೂಡಿ ಧರಿಸಿದ್ದ ಮಹಿಳೆ ಮಗುವನ್ನು ಎರಡು ಕಾರುಗಳ ನಡುವಿನ ಜಾಗದಲ್ಲಿ ಇಟ್ಟುಹೋದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಗುವಿನ ಕಾಲಿಗೆ ಹಾಕಲಾದ ಟ್ಯಾಗ್‌ನಲ್ಲಿ ‘ತಾಯಿ ಧನಲಕ್ಷ್ಮಿ, ಹಾಸನದ ಚಾಮರಾಜೇಂದ್ರ ಆಸ್ಪತ್ರೆ, ಏ. 20ರಂದು ಹೆರಿಗೆ’ ಎಂದು ನಮೂದಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇಲೆ ಕೋಟೆ ಪೊಲೀಸರು ರಕ್ಷಿಸಿದ್ದು, ಈ ಗಂಡು ಮಗುವಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ.

ADVERTISEMENT

ಮಗು ಬಿಟ್ಟುಹೋದ ಮಹಿಳೆ ಮತ್ತು ಜತೆಗಿದ್ದ ಪುರುಷ ದಾವಣಗೆರೆ ಜಿಲ್ಲೆ ಹೊನ್ನಾಳಿಯವರು. ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿದೆ.

ಮಗು ಎಸೆದ ದೃಶ್ಯಾವಳಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.