ADVERTISEMENT

ರಾಜ್ಯದ ಮೀನುಗಾರರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಕಾರವಾರ: ಮಲ್ಪೆ, ಮಂಗಳೂರು ಮೀನುಗಾರಿಕೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುಮಾರು 60ಕ್ಕೂ ಹೆಚ್ಚು ಟ್ರಾಲರ್‌ಗಳ ಮೇಲೆ ಮಹರಾಷ್ಟ್ರ ರಾಜ್ಯದ ರತ್ನಗಿರಿಯ ಮೀನುಗಾರರು ದಾಳಿ ಮಾಡಿ, ಮೀನುಗಾರರ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಅರಬ್ಬಿ ಸಮುದ್ರದಲ್ಲಿ ರತ್ನಗಿರಿಯಿಂದ ಅಂದಾಜು 90 ನಾಟಿಕಲ್ ಮೈಲು ದೂರದಲ್ಲಿ ಈ ಟ್ರಾಲರ್ ದೋಣಿಗಳು ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ದೋಣಿಗಳಲ್ಲಿ ಬಂದ ಮೀನುಗಾರರು ಟ್ರಾಲರ್ ದೋಣಿಗಳ ಮೇಲೇರಿ ಕಾರ್ಮಿಕರಿಗೆ ಮನಬಂದಂತೆ ಹೊಡೆದು ಬಲೆ, ಸಲಕರಣೆಗಳನ್ನು ನೀರಿಗೆ ಎಸೆದಿದ್ದಾರೆ.

ಮರಾಠಿಯಲ್ಲಿ ಮಾತನಾಡುತ್ತಿದ್ದ ಮೀನುಗಾರರು `ನೀವು ಇಲ್ಲಿಗೆ ಬಂದು ಮೀನುಗಾರಿಕೆ ನಡೆಸಬಾರದು. ನಿಮ್ಮ ಊರಿಗೆ ಹೋಗಿ, ಮತ್ತೆ ಈ ಕಡೆ ಬಂದರೆ ಎಚ್ಚರ~ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮೀನುಗಾರರು ದೂರವಾಣಿ ಮೂಲಕ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.