ADVERTISEMENT

ರೈಲಿಗೆ ಸಿಲುಕಿ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST

ಶಹಾಬಾದ:  ಗುಲ್ಬರ್ಗದಿಂದ ಶಹಾಬಾದ ಪಟ್ಟಣಕ್ಕೆ ಹೊರಟಿದ್ದ ಫಲಕುನಾಮಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಂದು ಮಗು ಮತ್ತು ಇಬ್ಬರು ಮಹಿಳೆಯರು ರೈಲಿನ ಅಡಿಗೆ ಸಿಕ್ಕಿ ದಾರುಣವಾಗಿ ಸಾವಿಗೀಡಾದ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.

ಫಲಕುನಾಮಾ ರೈಲು ಇಲ್ಲಿನ ರೈಲ್ವೆಗೇಟ್ ಬಳಿ ಬಂದಾಗ ಕೆಲವರು ಚೈನ್ ಎಳೆದಿದ್ದಾರೆ. ಇಬ್ಬರು ಮಹಿಳೆಯರು ಹಾಗೂ ಮಗು ರೈಲಿನಿಂದ ಕೆಳಗಿಳಿದು ಹಳಿ ದಾಟಲು ಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಗೂಡ್ಸ್ ರೈಲಿನಡಿ ಸಿಕ್ಕಿ ಮೂವರೂ ಸಾವಿಗೀಡಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ ಗೆ ತಿಳಿಸಿದರು. ಮೃತರಾದವರ ವಿವರಗಳು ತಿಳಿದುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.