ADVERTISEMENT

ರೈಲ್ವೆ ಬಜೆಟ್: ರಾಜ್ಯಕ್ಕೆ ಗುಟುಕು ಕೊಡುಗೆ, ಕೋಲಾರಕ್ಕೆ ಬೋಗಿ ತಯಾರಿ, ಬೆಂಗಳೂರಿಗೆ ವಿಶೇಷ ತರಬೇತಿ ಘಟಕ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 12:10 IST
Last Updated 14 ಮಾರ್ಚ್ 2012, 12:10 IST

ಬೆಂಗಳೂರು (ಪಿಟಿಐ): ರಾಜ್ಯಕ್ಕೆ ಈ ಬಾರಿ ರೈಲು ಬಜೆಟ್‌ನಲ್ಲಿ ಅಂತಹ ಹೇಳಿಕೊಳ್ಳುವಂತದ್ದೇನೂ ಸಿಕ್ಕಿಲ್ಲ. ಕೋಲಾರದಲ್ಲಿ ಬೋಗಿ ತಯಾರಿಕಾ ಘಟಕ, ಬೆಂಗಳೂರಿನಲ್ಲಿ ವಿಶೇಷ ತರಬೇತಿ ಘಟಕವಷ್ಟೇ ಸಮಾಧಾನ ತರುವಂತಹ ಸಂಗತಿಗಳು. ಉಳಿದಂತೆ 9 ಹೊಸ ರೈಲುಗಳನ್ನು ಪರಿಚಯಿಸಿರುವುದನ್ನು ಬಿಟ್ಟರೆ ರಾಜ್ಯದ ಬಹುತೇಕ ಬೇಡಿಕೆಗಳನ್ನು ಕಡೆಗಣಿಸಲಾಗಿದೆ.

ಹೊಸ ರೈಲುಗಳಲ್ಲಿ 6 ಎಕ್ಸ್‌ಪ್ರೆಸ್ 3 ಪ್ಯಾಸೆಂಜರ್ ರೈಲುಗಳಾಗಿದ್ದು, ಅವು ಇಂತಿವೆ:
1) ಯಶವಂತಪುರ-ಕೊಚುವೇಲಿ ಎಸಿ  ಎಕ್ಸ್‌ಪ್ರೆಸ್ ರೈಲು (ವಾರಕ್ಕೊಮ್ಮೆ)
2) ಚೆನ್ನೈ - ಬೆಂಗಳೂರು ಎಸಿ ಡಬ್ಬಲ್ ಡೆಕ್ಕರ್  ಎಕ್ಸ್‌ಪ್ರೆಸ್ ರೈಲು (ಪ್ರತಿದಿನ)
3) ಬೀದರ್ - ಸಿಕಂದರಬಾದ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ವಾರದಲ್ಲಿ  6 ದಿನ)
4) ಇಂದೋರ್ - ಯಶವಂತಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
5) ಮೈಸೂರು - ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
6) ಸೋಲಾಪುರ-ಯಶವಂತಪುರ (ವಾರದಲ್ಲಿ ಮೂರು ಸಲ)

ಪ್ಯಾಸೆಂಜರ್ ರೈಲುಗಳು :
ಮೈಸೂರು - ಶ್ರವಣಬೆಳಗೊಳ
ಮೈಸೂರು - ಚಾಮರಾಜನಗರ
ಮೈಸೂರು - ಬೀರೂರು

ಉಳಿದಂತೆ ಕೆಲವು ಹೊಸ ರೈಲು ಮಾರ್ಗಗಳ ಸ್ಥಾಪನೆಗೂ ಅಂಗೀಕಾರ ನೀಡಲಾಗಿದೆ. ಅವು
ಗದಗ - ಹಾವೇರಿ
ಗದಗ - ವಾಡಿ
ಚಿಕ್ಕಬಳ್ಳಾಪುರ - ಪುಟ್ಟಪರ್ತಿ
ಶ್ರೀನಿವಾಸಪುರ - ಮದನಪಳ್ಳಿ

ADVERTISEMENT

ಅಲ್ಲದೆ, ಹೊಸ ರೈಲು ಮಾರ್ಗಗಳ ಸರ್ವೇ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಅವು: 
ಹಾವೇರಿ - ಶಿರಸಿ
ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರ,
ಮಧುಗಿರಿ - ಗೌರಿ ಬಿದನೂರು
 

ಕೋಲಾರ - ಚಿಂತಾಮಣಿ, ಚಿಕ್ಕಬಳ್ಳಾಪುರ - ಶಿಡ್ಲಘಟ್ಟ ಮಾರ್ಗಗಳ ಗೇಜ್ ಪರಿವರ್ತನೆಗೆ ಒಪ್ಪಿಗೆ ನೀಡಲಾಗಿದೆ.

ರಾಮನಗರ - ಚನ್ನಪಟ್ಟಣ, ಮೈಸೂರು - ನಾಗನಹಳ್ಳಿ, ಮದ್ದೂರು-ಹನಕೆರೆ, ಬಳ್ಳಾಕೆರೆ-ಬಿರೂರು, ಬಿರೂರು-ಅಜಾಂಪುರ ಜೋಡಿ ರೈಲು ಮಾರ್ಗಗಳನ್ನು ಪ್ರಸಕ್ತ ಸಾಲಿನಲ್ಲಿ  ಪೂರ್ಣಗೊಳಿಸಲು ಉದ್ದೇಶಿಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.