ADVERTISEMENT

ಲಾರಿಗೆ ಗುದ್ದಿದ ಎಸ್ ಯು ವಿ: ಒಂದೇ ಕುಟುಂಬದ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 9:20 IST
Last Updated 23 ಏಪ್ರಿಲ್ 2012, 9:20 IST

ಗುಲ್ಬರ್ಗ (ಪಿಟಿಐ): ತಾವು ಪಯಣಿಸುತ್ತಿದ್ದ ~ಎಸ್ ಯು ವಿ~ ಇಲ್ಲಿಗೆ 100 ಕಿ.ಮೀ. ದೂರದ ಮುಧೋಳದ ಬಳಿ ನಿಂತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎಸ್ ಯು ವಿ ನಲ್ಲಿ ಇದ್ದ ಒಂದೇ ಕುಟುಂಬದ ನಾಲ್ವರು ಮೃತರಾಗಿ ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ಘಟಿಸಿದೆ.

ಅಪಘಾತದಲ್ಲಿ ಸಾವು-ನೋವಿಗೆ ಈಡಾದವರು ರಾಯಚೂರಿನಿಂದ ಗುಲ್ಬರ್ಗದ ಕಡೆಗೆ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.