ADVERTISEMENT

ಲಾರಿ ಚಾಲಕರ ಮೇಲೆ ಹಲ್ಲೆ: 11 ಮಂದಿ ಬಂಧನ

ಜಾನುವಾರು ಅಕ್ರಮ ಸಾಗಾಟ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಲಾರಿ ಚಾಲಕರ  ಮೇಲೆ ಹಲ್ಲೆ: 11 ಮಂದಿ ಬಂಧನ
ಲಾರಿ ಚಾಲಕರ ಮೇಲೆ ಹಲ್ಲೆ: 11 ಮಂದಿ ಬಂಧನ   

ಭಟ್ಕಳ (ಉತ್ತರ ಕನ್ನಡ): ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ, ಗುಂಪೊಂದು ಭಾನುವಾರ ತಡರಾತ್ರಿ ಮುರ್ಡೇಶ್ವರ ಬಸ್ತಿಮಕ್ಕಿ ಸಮೀಪ ಎರಡು ಲಾರಿಗಳನ್ನು ಅಡ್ಡಗಟ್ಟಿ ಚಾಲಕರು ಮತ್ತು ಕ್ಲೀನರ್‌ಗಳ ಮೇಲೆ ಹಲ್ಲೆ ನಡೆಸಿದೆ.

ಪ್ರಕರಣದ ಸಂಬಂಧ, 11 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜುನಾಗಡ ಗೋಶಾಲೆಯಿಂದ ತಲಾ 13 ಹಸು ಹಾಗೂ ಕರುಗಳನ್ನು ಪರವಾನಗಿ ಪತ್ರದೊಂದಿಗೆ ಕೇರಳದ ಕೊಚ್ಚಿಯ ಗೋಶಾಲೆಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ, ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತಿಳಿದ ಆರೋಪಿಗಳು ವಾಹನಗಳ ಗಾಜು ಒಡೆದು ಹಾಕಿದ್ದಾರೆ. ಇದರಿಂದ, ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

ಹಲ್ಲೆಗೀಡಾದ ಕಾಲೂಬಾಯ್, ಬಲದೇವ್ ಚೌಡ, ಪವನ್, ಸಾಮಂತ್ ಬಾಯ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಾನುವಾರುಗಳು ಈಗ ಮುರ್ಡೇಶ್ವರ ಠಾಣೆಯ ಆವರಣದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.