ADVERTISEMENT

ಲಿಂಗಾಯತ ಸಮಾಜಕ್ಕೆ ಅವಮಾನ: ಮಾತೆ ಮಹಾದೇವಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಮಾತೆ ಮಹಾದೇವಿ
ಮಾತೆ ಮಹಾದೇವಿ   

ಕೂಡಲಸಂಗಮ: ‘ಸಚಿವರಾಗಿ ಎಂ.ಬಿ.ಪಾಟೀಲ ಮಾಡಿದ ಕೆಲಸಗಳು, ಜಾರಿಗೆ ತಂದ ಯೋಜನೆಗಳು ಗಮನಾರ್ಹ. ಅತ್ಯಂತ ಕ್ರಿಯಾಶೀಲರಾದ ಅವರಿಗೆ ಸಚಿವ ಸ್ಥಾನ ಕೊಡದೆ ಇರುವುದು ನಿಜಕ್ಕೂ ಖಂಡನಾರ್ಹ’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

‘ಲಿಂಗಾಯತ ಶಾಸಕರ ಸಂಖ್ಯೆಗೆ ಅನುಗುಣವಾಗಿ ಸಚಿವ ಸ್ಥಾನವನ್ನು ನಿಗದಿ ಮಾಡಬೇಕಿತ್ತು. ಆದರೆ, ಪ್ರಸ್ತುತ ಆಯ್ಕೆಯಿಂದ ಲಿಂಗಾಯತ ಸಮಾಜಕ್ಕೆ ಅವಮಾನವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗಾಗಿನ ಹೋರಾಟದಲ್ಲಿ ಎಂ.ಬಿ.ಪಾಟೀಲ ಮುಂಚೂಣಿಯಲ್ಲಿ ಇದ್ದುದರಿಂದ ಅವರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ವಿಳಂಬ ಮಾಡದೇ, ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT