ADVERTISEMENT

ಲೆವಿ ಅಕ್ಕಿ: ಪರಿಶೀಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:56 IST
Last Updated 15 ಡಿಸೆಂಬರ್ 2013, 19:56 IST

ಸಿರುಗುಪ್ಪ : ಅಕ್ಕಿ ಗಿರಣಿಗಳಿಗೆ ನಿಗದಿ ಪಡಿಸಿರುವ ಲೆವಿ ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿ ಮತ್ತು ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲರಿಗೆ ತಾಲ್ಲೂಕಿನ ಅಕ್ಕಿ ಗಿರಣಿ ಮಾಲೀಕರ ಸಂಘ  ಭಾನುವಾರ ಮನವಿ ಸಲ್ಲಿಸಿದೆ.

ಖಾಸಗಿ ಕಾರ್ಯಕ್ರಮಕ್ಕೆ ಇಲ್ಲಿಗೆ ಬಂದಿದ್ದ ಸಚಿವರನ್ನು ಭೇಟಿ ಮಾಡಿದ ಅಕ್ಕಿ ಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

‘ಸರ್ಕಾರ ನಿಗದಿಪಡಿಸಿರುವ ಲೆವಿ ಅಕ್ಕಿ ಸಂಗ್ರಹ ಮತ್ತು ದರದಿಂದ  ಗಿರಣಿಗಳಿಗೆ ಭಾರಿ ನಷ್ಟ ಉಂಟಾಗುತ್ತದೆ. ಆದ್ದರಿಂದ ಮತ್ತೊಮ್ಮೆ ಪರಿಶೀಲಿಸಬೇಕು’ ಎಂದು ಸಂಘದ ಅಧ್ಯಕ್ಷ ಬಿ.ಜಿ. ಸಿದ್ದಾರೆಡ್ಡಿ ಸಚಿವರಿಗೆ ವಿವರಿಸಿದರು.

ಪ್ರತಿ ಕ್ವಿಂಟಲ್‌ ಲೆವಿ ಅಕ್ಕಿಗೆ  ₨ 2,650 ನಿಗದಿಗೊಳಿಸಬೇಕು. ಅಕ್ಕಿ ಸಂಗ್ರಹಣೆಯನ್ನು 1.5 ಲಕ್ಷ ಟನ್‌ಗೆ ಇಳಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಬಗ್ಗೆ ಮುಖ್ಯಮಂತ್ರಿ ಮತ್ತು ಆಹಾರ ಸಚಿವರೊಂದಿಗೆ ಚರ್ಚಿಸುವುದಾಗಿ ಪಾಟೀಲರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.