
ಪ್ರಜಾವಾಣಿ ವಾರ್ತೆಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕುಲಪತಿ ಡಾ.ಎಚ್.ಬಿ. ವಾಲಿಕಾರ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ವಾಲಿಕಾರ ಶುಕ್ರವಾರ (ಅ.24) ನಿವೃತ್ತಿ ಹೊಂದಬೇಕಾಗಿತ್ತು. ಆದರೆ ನಿವೃತ್ತಿಯ ಮುನ್ನಾ ದಿನವೇ ಅಂದರೆ 23 ರಂದು ರಾಜ್ಯಪಾಲರ ಕಚೇರಿಯಿಂದ ಅಮಾನತು ಆದೇಶ ಬಂದಿದೆ.
ಕುಲಸಚಿವರ ಅಮಾನತು: ಕುಲಪತಿ
ಗಳೊಂದಿಗೆ ಬಂಧನಕ್ಕೊಳಗಾಗಿ ನಂತರ ಜಾಮೀನು ಪಡೆದಿರುವ ಕವಿವಿ ಕುಲಸಚಿವ (ಮೌಲ್ಯಮಾಪನ) ಡಾ.ಎಚ್.ಟಿ. ಪೋತೆ ಅವರನ್ನು ಅಮಾನತುಗೊಳಿಸಿ, ಅವರ ಸ್ಥಾನಕ್ಕೆ ಪ್ರೊ.ಎಂ.ಬಸವಣ್ಣ ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.