ಕುಶಾಲನಗರ: 11 ಕೆ.ವಿ. ಹೈಟೆನ್ಶನ್ ವಿದ್ಯುತ್ ತಂತಿಗಳಲ್ಲಿ ಉಂಟಾದ ಶಾರ್ಟ್ ಸರ್ಕಿಟ್‌ನಿಂದಾಗಿ ನಾಲ್ಕು ಎಕರೆ ಬಾಳೆ ತೋಟ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಇಲ್ಲಿಗೆ ಸಮೀಪದ ಕೂಡ್ಲೂರಿನಲ್ಲಿ ಭಾನುವಾರ ನಡೆದಿದೆ.
ಕೂಡ್ಲೂರಿನ ನಿವಾಸಿ ಸಾವಿತ್ರ ಅಮ್ಮಣ್ಣಿ ಅವರ ನಾಲ್ಕು ಎಕರೆ ಬಾಳೆ ತೋಟ ಬೆಂಕಿಗೆ ಆಹುತಿಯಾಗಿದೆ.
ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿದ್ದರಿಂದ ಬೆಳಿಗ್ಗೆ 11 ಗಂಟೆ ವೇಳೆ ಕಿಡಿ ಉಂಟಾಯಿತು. ಕೂಡಲೇ ತೋಟದ ತುಂಬೆಲ್ಲಾ ಬೆಂಕಿ ವ್ಯಾಪಿಸಿತು. ಇದರಿಂದಾಗಿ ಅರ್ಧ ಗಂಟೆಯಲ್ಲೇ ನಾಲ್ಕು ಎಕರೆ ಬಾಳೆ ತೋಟ ಸಂಪೂರ್ಣ ಭಸ್ಮವಾಯಿತು. ಅಲ್ಲದೆ, ಬಾಳೆ ತೋಟದೊಳಗೆ ಇರುವ 50 ತೆಂಗಿನ ಮರಗಳು ಮತ್ತು 100 ಸಿಲ್ವರ್ಓಕ್ ಮರಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿ ಸುಂದರ್‌ರಾಜ್ ಅರಸ್ ತಿಳಿಸಿದರು.
ಕುಶಾಲನಗರ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಬರುವ ವೇಳೆಗಾಗಲೇ ತೋಟದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.