ADVERTISEMENT

ವಿರಾಜಪೇಟೆಯಲ್ಲಿ ಭಾರಿ ಮಳೆ: ಸೇತುವೆ ಮುಳುಗಡೆ, ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 9:19 IST
Last Updated 12 ಜೂನ್ 2018, 9:19 IST
ವಿರಾಜಪೇಟೆಯಲ್ಲಿ ಭಾರಿ ಮಳೆ: ಸೇತುವೆ ಮುಳುಗಡೆ, ರಸ್ತೆ ಸಂಪರ್ಕ ಕಡಿತ
ವಿರಾಜಪೇಟೆಯಲ್ಲಿ ಭಾರಿ ಮಳೆ: ಸೇತುವೆ ಮುಳುಗಡೆ, ರಸ್ತೆ ಸಂಪರ್ಕ ಕಡಿತ   

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ, ಗೋಣಿಕೊಪ್ಪಲು, ಬಾಳೆಲೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. 

ವಿರಾಜಪೇಟೆ ತಾಲ್ಲೂಕಿನ ಬಹುತೇಕ ಕಡೆ ಶಾಲಾ–ಕಾಲೇಜಿಗೆ ರಜೆ ನೀಡಲಾಗಿದೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ನಾಪೋಕ್ಲು, ಅಯ್ಯಂಗೇರಿ ಶಾಲೆಗಳಿಗೂ ರಜೆ ನೀಡಲಾಗಿದೆ. ಮಡಿಕೇರಿ– ಭೇತ್ರಿ– ಎಮ್ಮೆಮಾಡು ಸೇತುವೆ ಮುಳುಗಡೆಯಾಗಿದೆ.

ಬಾಳೆಲೆ– ಕೊಟ್ಟಗೇರಿ ನಡುವೆಯ ರಸ್ತೆ ಕುಸಿದಿದ್ದು ಸಂಪರ್ಕ ಬಂದ್‌ ಆಗಿದೆ. ಇನ್ನು ಮಡಿಕೇರಿ, ಗಾಳಿಬೀಡು, ಸೋಮವಾರಪೇಟೆ, ಕುಶಾಲನಗರದಲ್ಲಿ ಬಿಡುವು ನೀಡುತ್ತಾ ಮಳೆ ಬೀಳುತ್ತಿದೆ. ದಕ್ಷಿಣ ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಇರ್ಪು ಜಲಾಶಯದಲ್ಲಿ ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ADVERTISEMENT

ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಬೀಳುತ್ತಿರುವ ಮಳೆಗೆ ಮಲ್ಲಳ್ಳಿ ಜಲಾಶಯವೂ ಪ್ರವಾಸಿಗರ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.