ADVERTISEMENT

ವ್ಯಂಗ್ಯಚಿತ್ರಕಾರ ರಾವ್ ಬೈಲ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 18:59 IST
Last Updated 4 ಏಪ್ರಿಲ್ 2018, 18:59 IST
ವ್ಯಂಗ್ಯಚಿತ್ರಕಾರ ರಾವ್ ಬೈಲ್ ಇನ್ನಿಲ್ಲ
ವ್ಯಂಗ್ಯಚಿತ್ರಕಾರ ರಾವ್ ಬೈಲ್ ಇನ್ನಿಲ್ಲ   

ಬೆಂಗಳೂರು: ಬೆಂಗಳೂರು: ‘ರಾವ್ ಬೈಲ್’ ಎಂದೇ ಖ್ಯಾತರಾಗಿದ್ದ ವ್ಯಂಗ್ಯಚಿತ್ರಕಾರ ಕಾಸರಗೋಡಿನ ಬೈಲಂಗಡಿ ಪ್ರಭಾಕರ ರಾವ್ (82) ಅನಾರೋಗ್ಯದಿಂದಾಗಿ ನಗರದಲ್ಲಿ ಬುಧವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಕಾಸರಗೋಡಿನ ಬೈಲಂಗಡಿ ಪ್ರಭಾಕರ ರಾವ್ ಅವರ ಪೂರ್ಣ ಹೆಸರು. ತಮ್ಮ ಹೆಸರು ಉದ್ದ ಎನಿಸಿ ‘ರಾವ್ ಬೈಲ್’ ಎಂದು ಚಿಕ್ಕದಾಗಿಸಿಕೊಂಡಿದ್ದ ಅವರು ವ್ಯಂಗ್ಯಚಿತ್ರ ಲೋಕದಲ್ಲಿ ರಾವ್ ಬೈಲ್ ಎಂದೇ ಪ್ರಸಿದ್ಧರಾಗಿದ್ದರು.

ADVERTISEMENT

ವ್ಯಂಗ್ಯಚಿತ್ರ, ಚಿತ್ರಕಲೆ, ಕೊಲಾಜ್, ಮತ್ತು ಮಿಮಿಕ್ರಿ ಎಲ್ಲದರಲ್ಲೂ ಅವರದ್ದು ಬಹುಮುಖ ಪ್ರತಿಭೆ. ಅವರು ಮುಂಬಯಿ ಜೀವ ವಿಮಾ ಕಂಪೆನಿಯಲ್ಲಿ ಕಲಾವಿದರಾಗಿ 31 ವರ್ಷ ಕೆಲಸ ಮಾಡಿ, ಸ್ವಯಂ ನಿವೃತ್ತಿ ಪಡೆದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.

ಅವರ ವ್ಯಂಗ್ಯಚಿತ್ರಗಳು ಶಂಕರ್‌ ವೀಕ್ಲಿ, ಡಿಬೋನೇರ್, ಟೈಮ್ಸ್ ಆಫ್ ಇಂಡಿಯಾ, ತಾಜ್ ಮ್ಯಾಗಝಿನ್, ಸಿಗ್ನೇಚರ್, ರೀಡರ್ಸ್ ಡೈಜೆಸ್ಟ್ ಹಾಗೂ ಸುಧಾ, ಮಯೂರ, ತರಂಗ ಸೇರಿದಂತೆ ಕನ್ನಡದ ಕೆಲ ನಿಯತಕಾಲಿಕ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.