ADVERTISEMENT

ಶರಣ ಪ್ರಕಾಶ ಪಾಟೀಲ ವಿರುದ್ಧದ ದೂರು ವಜಾ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದ್ದ ದೂರನ್ನು ನ್ಯಾಯಮೂರ್ತಿ ಪಿ.
ವಿಶ್ವನಾಥಶೆಟ್ಟಿ ವಜಾ ಮಾಡಿದ್ದಾರೆ.

‘ಕಿದ್ವಾಯಿ ಸಂಸ್ಥೆಯ ನಿರ್ದೇಶಕರಾಗಿದ್ದ ಎಂ. ವಿಜಯಕುಮಾರ್ ವಿರುದ್ಧ ನಿಯಮ ಬಾಹಿರವಾಗಿ ಉಪಕರಣಗಳ ಖರೀದಿ, ಸಿವಿಲ್‌ ಕಾಮಗಾರಿ ಕೈಗೊಂಡಿರುವ ಮತ್ತು ನೇಮಕಾತಿ ಮಾಡಿಕೊಂಡಿರುವ ಆರೋಪ ಇದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತ ದಳ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ಅವರು ಸ್ವಯಂ ನಿವೃತ್ತಿ ಪಡೆಯಲು ಶರಣ ಪ್ರಕಾಶ ಪಾಟೀಲ ಅನುಮತಿ ನೀಡಿದ್ದಾರೆ’ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಆರ್. ವಿನಯಕುಮಾರ್ ಎಂಬುವರು ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT