ADVERTISEMENT

ಶಾಸಕ ಮುನವಳ್ಳಿಗೆ ಬೆದರಿಕೆ ಪತ್ರ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ಗಂಗಾವತಿ (ಕೊಪ್ಪಳ): ಶಾಸಕ ಪರಣ್ಣ ಮುನವಳ್ಳಿ ಅವರ ಹೆಸರಿಗೆ 'ಕೋಬ್ರಾ ಟೀಂ' ಹೆಸರಲ್ಲಿ ಬೆದರಿಕೆ ಪತ್ರ ಬಂದಿದ್ದು, ₹50 ಲಕ್ಷ ಮೊತ್ತಕ್ಕೆ ಬೇಡಿಕೆ ಇಡಲಾಗಿದೆ.

ಶಾಸಕರ ನಿವಾಸದ ಕಾವಲುಗಾರರ ಕೈಗೆ ಅಪರಿಚತ ವ್ಯಕ್ತಿಯೊಬ್ಬರು ಬುಧವಾರ, ಶಾಸಕರಿಗೆ ತಲುಪಿಸುವಂತೆ ಲಕೋಟೆಯನ್ನು ಕೊಟ್ಟು ಹೋಗಿದ್ದಾರೆ.

‘ಮೂರು- ನಾಲ್ಕು ದಿನಗಳಲ್ಲಿ ₹50 ಲಕ್ಷ ನೀಡದಿದ್ದರೆ ನಿಮ್ಮ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕುತ್ತೇನೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಅಲ್ಲದೆ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ’ ಎಂದು ಶಾಸಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.