
ಪ್ರಜಾವಾಣಿ ವಾರ್ತೆಹಾವೇರಿ: ಚಿತ್ರದುರ್ಗದ ಮುರುಘಾ ಮಠದ ಶಾಖಾ ಮಠವಾದ ಹಾವೇರಿಯ ಹೊಸಮಠದಿಂದ ನೀಡಲಾಗುವ ಡಾ.ಶಿವಮೂರ್ತಿ ಮುರುಘಾ ಶರಣ (ಡಾ.ಶಿಮುಶ) ಪ್ರಶಸ್ತಿಗೆ ಕ.ವಿ.ವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾ-ಪಕ, ಸಾಹಿತಿ ಡಾ. ವೀರಣ್ಣ ರಾಜೂರ ಆಯ್ಕೆಯಾಗಿದ್ದಾರೆ.
ಶರಣರ ಸಾಮಾಜಿಕ ಆಂದೋಲನ ಸಂಸ್ಮರಣೆ, ಮುರುಘಾ ಶರಣರ ಆದರ್ಶ ಅನುಸರಿಸಿ ಹೊಸದಿಕ್ಕು ತೋರುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₨ 50 ಸಾವಿರ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಇದೇ 22 ರಂದು ಹಾವೇರಿಯಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.