ADVERTISEMENT

ಶೆಟ್ಟಿಹಳ್ಳಿ ಅರಣ್ಯ: ಬಾಂಗ್ಲಾ ಪ್ರಜೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಶೆಟ್ಟಿಹಳ್ಳಿ ಅರಣ್ಯ: ಬಾಂಗ್ಲಾ ಪ್ರಜೆ ವಶಕ್ಕೆ
ಶೆಟ್ಟಿಹಳ್ಳಿ ಅರಣ್ಯ: ಬಾಂಗ್ಲಾ ಪ್ರಜೆ ವಶಕ್ಕೆ   

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಶನಿವಾರ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತನ್ನ ಹೆಸರು ಯಾನಬಿ, ದೇಶ ಬಾಂಗ್ಲಾ ಎಂದು ಹೇಳಿಕೊಳ್ಳುವ ಆತ ಉಳಿದ ಯಾವ ವಿವರಗಳನ್ನೂ ಹಂಚಿಕೊಳ್ಳುತ್ತಿಲ್ಲ. ಸುಮಾರು 55 ವರ್ಷದ ಈ ವ್ಯಕ್ತಿ ಕೆಂಪು ಪ್ಯಾಂಟ್, ಅರ್ಧ ತೋಳಿನ ಕೆಂಪು ಜುಬ್ಬಾ ಧರಿಸಿದ್ದಾನೆ. ಬೆಳಿಗ್ಗೆ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದಾನೆ. ಸಂಜೆಯವರೆಗೆ ವಿಚಾರಣೆ ನಡೆಸಿದರೂ, ಸುಳಿವು ದೊರಕದ ಕಾರಣ ರಾತ್ರಿ ತುಂಗಾ ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

‘ಆತ ಮಾತನಾಡುವ ಭಾಷೆ ಅರ್ಥವಾಗುತ್ತಿಲ್ಲ. ಹಿಂದಿ, ಉರ್ದು ಅಲ್ಲ. ಬಂಗಾಳಿಯೂ ಅಲ್ಲ. ಆತನ ಬರವಣಿಗೆಯೂ ವಿಚಿತ್ರವಾಗಿದೆ. ಬೇರೆ ಬೇರೆ ಭಾಷೆ ಗೊತ್ತಿರುವ ವ್ಯಕ್ತಿಗಳನ್ನು ಕರೆಸಿ ಹೆಚ್ಚಿನ ವಿಚಾರಣೆ ಮಾಡಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.