ADVERTISEMENT

ಸಂಗೀತ-ಪ್ರದರ್ಶಕ ಕಲೆಗಳ ವಿವಿ ಲಾಂಛನ, ಧ್ಯೇಯವಾಕ್ಯ ಆಹ್ವಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 13:50 IST
Last Updated 1 ಜನವರಿ 2011, 13:50 IST

ಮೈಸೂರು: ಮೈಸೂರಿನಲ್ಲಿ ಪ್ರಾರಂಭವಾಗಿರುವ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಅರ್ಥಪೂರ್ಣ ಲಾಂಛನ ಮತ್ತು ಧ್ಯೇಯವಾಕ್ಯ ರೂಪಿಸುವ ಸಲುವಾಗಿ ನಾಡಿನ ಕಲಾವಿದರು, ವಿದ್ವಾಂಸರುಗಳಿಂದ ಲಾಂಛನ ಮತ್ತು ಧ್ಯೇಯವಾಕ್ಯಗಳನ್ನು ಆಹ್ವಾನಿಸಲಾಗಿದೆ.

ಲಾಂಛನ ಮತ್ತು ಧ್ಯೇಯವಾಕ್ಯಗಳು ಸಂಗೀತ, ನಾಟಕ, ಕಲೆಯ ವೈವಿಧ್ಯತೆಯನ್ನು ಬಿಂಬಿಸುವಂತಿರಬೇಕು. ಒಬ್ಬರು ಒಂದಕ್ಕಿಂತ ಹೆಚ್ಚು ರಚನೆಗಳನ್ನು ಸಲ್ಲಿಸಬಹುದು. ತಜ್ಞರ ಸಮಿತಿ ಲಾಂಛನ ಮತ್ತು ಧ್ಯೇಯವಾಕ್ಯ ಆಯ್ಕೆಮಾಡುವುದು. ಅಂಗೀಕೃತ ಲಾಂಛನಕ್ಕೆ ಐದು ಸಾವಿರ ರೂಪಾಯಿ ಮತ್ತು ಧ್ಯೇಯವಾಕ್ಯಕ್ಕೆ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು.
ಜ.15 ಕಡೆ ದಿನ.
ವಿಳಾಸ: ಕುಲಸಚಿವರು,
ಕೆಎಸ್‌ಜಿಎಚ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ,
ವಿಜಯನಗರ 4ನೇ ಹಂತ, 2ನೇ ಘಟ್ಟ
ಮೈಸೂರು- 570017.
ಮಾಹಿತಿಗೆ ದೂ: 0821-2402141 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.