ADVERTISEMENT

ಸಂಪುಟ ವಿಸ್ತರಣೆ: ಶೆಟ್ಟರ ಸಹಿತ 21 ಮಂದಿಯ ಪ್ರಮಾಣವಚನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 14:35 IST
Last Updated 8 ಆಗಸ್ಟ್ 2011, 14:35 IST
ಸಂಪುಟ ವಿಸ್ತರಣೆ: ಶೆಟ್ಟರ ಸಹಿತ 21 ಮಂದಿಯ ಪ್ರಮಾಣವಚನ
ಸಂಪುಟ ವಿಸ್ತರಣೆ: ಶೆಟ್ಟರ ಸಹಿತ 21 ಮಂದಿಯ ಪ್ರಮಾಣವಚನ   

ಬೆಂಗಳೂರು (ಪಿಟಿಐ): ಇಪ್ಪತ್ತೊಂದು ಮಂದಿ ಸಂಪುಟ ದರ್ಜೆ ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಸೋಮವಾರ ತಮ್ಮ ಸಂಪುಟವನ್ನು ವಿಸ್ತರಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಸದಾನಂದ ಗೌಡ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಜಗದೀಶ ಶೆಟ್ಟರ ಅವರು ವಿಸ್ತರಣೆಯಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಆದರೆ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ಸಲ್ಲಿಸಿದ ಗಣಿಗಾರಿಕೆ ಅಕ್ರಮ ಕುರಿತ ವರದಿಯಲ್ಲಿ ಆರೋಪಕ್ಕೆ ಗುರಿಯಾಗಿದ್ದ ರೆಡ್ಡಿ ಸಹೋದರರು ಮತ್ತು ಅವರ ನಿಕಟವರ್ತಿ ಶ್ರೀರಾಮುಲು ಅವರಿಗೆ ಸಂಪುಟದಲ್ಲಿ ಅವಕಾಶ ಲಭಿಸಿಲ್ಲ.

ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಸಂಪುಟಕ್ಕೆ ಸೇರ್ಪಡೆಯಾದವರು: ಜಗದೀಶ ಶೆಟ್ಟರ, ಡಾ. ವಿ.ಎಸ್. ಆಚಾರ್ಯ, ಸಿಎಂ ಉದಾಸಿ, ಗೋವಿಂದ ಕಾರಜೋಳ, ಎಸ್. ಸುರೇಶ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ, ಎಸ್. ಎ. ರವೀಂದ್ರನಾಥ, ಬಸವರಾಜ ಬೊಮ್ಮಾಯಿ, ಉಮೇಶ ಕತ್ತಿ, ಮುರುಗೇಶ ನಿರಾಣಿ, ಎಸ್.ಎ. ರಾಮದಾಸ್, ಲಕ್ಷ್ಮಣ ಸವಡಿ, ಸಿಸಿ ಪಾಟೀಲ್, ರೇವೂನಾಯ್ಕ್ ಬೆಳಮಗಿ, ಬಿ.ಎನ್. ಬಚ್ಚೇಗೌಡ, ಜೆ. ಕೃಷ್ಣ ಪಾಲೇಮಾರ್, ವಿ. ಸೋಮಣ್ಣ, ಎ. ನಾರಾಯಣ ಸ್ವಾಮಿ ಮತ್ತು ಎಂಪಿ ರೇಣುಕಾಚಾರ್ಯ.
ಈ ವಿಸ್ತರಣೆಯೊಂದಿಗೆ ಸದಾನಂದ ಗೌಡ ಸಂಪುಟದ ಗಾತ್ರ 22ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.